ನಡುರಸ್ತೆಯಲ್ಲಿ ಯುವಕನಿಗೆ ಇರಿದು ಪರಾರಿ

Attempt to robbery and assaulted with knife on a boy

05-03-2018

ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿ ಪಡೆಯುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಕೃತ್ಯ ರೆಸಿಡೆನ್ಸಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ರಾತ್ರಿ 12.30ರ ವೇಳೆ ಚಾಕುವಿನಿಂದ ಇರಿತದಿಂದ ಗಾಯಗೊಂಡಿರುವ ಐಟಿಸಿ ಗಾರ್ಡೇನಿಯಾ ಹೊಟೇಲ್‍ನಲ್ಲಿ ತರಬೇತಿಯಾಗಿದ್ದ ಉತ್ತರಾಖಂಡ ಮೂಲದ ನೀರಜ್ ಜೋಷಿ (20) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೀರಜ್ ಜೋಷಿ ಐಟಿಸಿ ಗಾರ್ಡೇನಿಯಾದಿಂದ ಹೊರಟು ರೆಸಿಡೆನ್ಸಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಸ್ನೇಹಿತರ ಜತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ನೇಹಿತರು, ಜೋಷಿಯಿಂದ ಕೆಲವು ಹೆಜ್ಜೆ ಹಿಂದೆ ಇದ್ದರು. ಆಗ ಜೋಷಿ ಬಳಿ ನಿಧಾನವಾಗಿ ಚಲಿಸಿದ ಬೈಕ್‍ವೊಂದರ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಓರ್ವ, ಚಾಕು ತೆಗೆದು ಕುತ್ತಿಗೆಗೆ ಇರಿದಿದ್ದಾನೆ. ಸಮೀಪದಲ್ಲೇ ಇದ್ದ ಸ್ನೇಹಿತರು ಜೋಷಿ ನೆರವಿಗೆ ಓಡಿ ಬಂದಿದ್ದಾರೆ. ಅಷ್ಟರಲ್ಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಜೋಷಿಯನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಜೋಷಿ ಬಳಿಯಿಂದ ಹಣ, ಆಭರಣ ದೋಚುವ ಪ್ರಯತ್ನ ಆಗಿರಬಹುದು. ಆದರೆ, ಸಮೀಪದಲ್ಲೇ ಇದ್ದ ಸಹೋದ್ಯೋಗಿಗಳು ಆತನ ನೆರವಿಗೆ ಬಂದ ಕಾರಣ ದರೋಡೆ ಯತ್ನ ವಿಫಲವಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಗಾಯಾಳು ಚೇತರಿಸಿಕೊಂಡ ಬಳಿಕ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

mureder attempt ಸಹೋದ್ಯೋಗಿ ವಿಫಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ