ನೌಕಾಪಡೆಯ ನಿವೃತ್ತ ಯೋಧ ಆತ್ಮಹತ್ಯೆ

Navy retired warrior suicide

05-03-2018

ಬೆಂಗಳೂರು: ಹೊರಮಾವಿನ ಅಪಾರ್ಟ್‍ಮೆಂಟ್‍ವೊಂದರಲ್ಲಿ ನಿನ್ನೆ ರಾತ್ರಿ ಖಿನ್ನತೆಗೆ ಒಳಗಾಗಿದ್ದ ನೌಕಾಪಡೆಯ ನಿವೃತ್ತ ಯೋಧ ಅನಿಲ್ ಅಹುಜಾ ತನ್ನ ಬಳಿಯಿದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊರಮಾವಿನ ಪಾಪಯ್ಯ ಲೇಔಟ್‍ನ ಒನ್‍ಟೆನ್ ಅಪಾರ್ಟ್‍ಮೆಂಟ್‍ನ ಫ್ಲಾಟ್‍ವೊಂದರಲ್ಲಿ ವಾಸಿಸುತ್ತಿದ್ದ ಅನಿಲ್ ಅಹುಜಾ(54) ರಾತ್ರಿ 9ರ ವೇಳೆ ಮನೆಯ ತನ್ನ ಕೊಠಡಿಯಲ್ಲಿ ರಿವಲ್ವಾರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎರಡು ವರ್ಷಗಳ ಕಾಲ ನೌಕಪಡೆಯಲ್ಲಿ ಕಾರ್ಯನಿರ್ವಹಿಸಿ ಕೆಲಸ ಬಿಟ್ಟು ಬಂದು ಹೊರಮಾವುವಿನಲ್ಲಿ ಹೋಂ ಸಾಯಿ ಗ್ಯಾರೇಜ್ ನಡೆಸುತ್ತಿದ್ದ ಅನಿಲ್ ಅಹುಜಾ ಅವರಿವರ ಬಳಿ ಸಾಕಷ್ಟು ಸಾಲ ಮಾಡಿಕೊಂಡು ಗ್ಯಾರೇಜನ್ನು ಸರಿಯಾಗಿ ನಡೆಸುತ್ತಿರಲಿಲ್ಲ. ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಅಹುಜಾ ವಿಷ ಕಡಿಯುವುದು ಸಾಯಲು ಯತ್ನಿಸುವುದು ಸೇರಿ  ಸಾಕಷ್ಟು ಬಾರಿ ಆತ್ಮಹತ್ಯೆ ಯತ್ನ ನಡೆಸಿ ಪಾರಾಗಿದ್ದರು, ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ಆತನಿಂದ ವಿಚ್ಛೇದನ ಪಡೆದುಕೊಂಡಿದ್ದರು. ಪತ್ನಿಯೂ ದೂರವಾದ ಹಿನ್ನಲೆಯಲ್ಲಿ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪರವಾನಗಿ ಪಡೆದಿದ್ದ ರಿವಲ್ವಾರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Retired officer suicide ರಿವಲ್ವಾರ್ ತನಿಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ