ಕುಡುಕ ಚಾಲಕನ ರಂಪಾಟ...

Drunken car driver v/s traffic police

05-03-2018

ಬೆಂಗಳೂರು: ನಗರದ ಕಾರ್ಪೋರೇಷನ್ ಸರ್ಕಲ್ ಬಳಿ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ತಪಾಸಣೆ ನಡೆಸಲು ಬಂದ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದು ನನ್ನ ಹೆಸರು ಸಿದ್ದರಾಮಯ್ಯ ಎಂದು ಹೇಳುತ್ತಾ ರಂಪಾಟ ಮಾಡಿದ್ದಾನೆ.

ಮದ್ಯಪಾನ ಮಾಡಿ ಕಾರನ್ನು ಚಲಾಯಿಸಿಕೊಂಡ ವ್ಯಕ್ತಿಯನ್ನು ತಡೆದ ತಪಾಸಣೆ ನಡೆಸಲು ಹೋಗಿ  ನಿನ್ನ ಹೆಸರೇನು ಎಂದು ಕೇಳಿದರೆ "ನನ್ನ ಹೆಸರು ಸಿದ್ದರಾಮಯ್ಯ. ಬರ್ಕೊಳಿ ನಿನ್ನ ಮನೆ ಎಲ್ಲಿ, ಕೆಲಸ ಮಾಡುವುದು ಎಲ್ಲಿ ಎಂದಾಗ "ಭೂಮಿ ಮೇಲೆ" ಎಂದು ಧಮ್ಕಿ ಹಾಕಿ ತಾನೊಬ್ಬ ಐಎಫ್‍ಎಸ್ ಆಫೀಸರ್. ನನ್ ಮೇಲೆಯೇ ನೀವು ಕೇಸ್ ಹಾಕಿ, ಗಾಡಿ ಸೀಜ್ ಮಾಡಿಕೊಳ್ತೀರಾ?. ನಿಮಗೆ ನಾನು ಯಾರು ಅಂತ ತೋರಿಸ್ತೀನಿ ಎಂದು ಆವಾಜ್ ಹಾಕಿದ್ದಾನೆ.

ರಂಪಾಟ ಮಾಡಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು, ಆತನನ್ನು ಆಟೋವೊಂದರಲ್ಲಿ ಮನೆಗೆ ಕಳಿಸಿದ್ದಾರೆ."ನಾಳೆ ಕಾರು ಬಿಡಿಸಿಕೊಳ್ಳಲು ಬರ್ತೀನಲ್ಲ ಆಗ ತೋರಿಸ್ತೀನಿ ನಾನು ಯಾರು ಅಂತ ಎಂದು ಹೇಳಿ ಹೋಗಿದ್ದಾನೆ ಕುಡುಕನ ರಂಪಾಟವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಹಲಸೂರು ಗೇಟ್ ಸಂಚಾರ ಪೊಲೀಸರು ಕುಡಿದು ವಾಹನ ಚಲಾಯಿಸಿರುವುದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

IFS Drunk ತಪಾಸಣೆ ಧಮ್ಕಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ