ಜನ ಸುರಕ್ಷಾ ಯಾತ್ರೆ ಉದ್ದೇಶ ಏನು?

What is the purpose of the Jan Sangh Yatra?

05-03-2018

ಮಂಗಳೂರು: ಜನ ಸುರಕ್ಷಾ ಯಾತ್ರೆ ಮಾಡಲು ಬಿಜೆಪಿಯವರಿಗೆ ಯೋಗ್ಯತೆ ಇಲ್ಲ, ಎಂದು ಸಚಿವ ರಮಾನಾಥ್ ರೈ ಕಿಡಿಕಾರಿದ್ದಾರೆ. ಬಿಜೆಪಿಯವರು ಹಿಂದೂಗಳ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ ರಮಾನಾಥ್ ರೈ, ಬಾಳಿಗಾ ಹತ್ಯೆ ಮಾಡಿದವರು ಯಾರು, ಹರೀಶ್ ಪೂಜಾರಿ ಹತ್ಯೆ ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಾ ಬಂದಿದೆ, ನೈತಿಕ ಪೊಲೀಸ್ ಗಿರಿ ನಡೆಸಿ ಜನರಿಗೆ ತೊಂದರೆ ಕೊಟ್ಟಿದ್ದಾರೆ, ಮತ್ತೆ ಇವರೇ ಜನಸುರಕ್ಷಾ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜನಸುರಕ್ಷಾ ಯಾತ್ರೆಯ ಉದ್ದೇಶ ಏನು? ಶಾಂತಿ ಕಾಪಾಡೋದಾ ಅಥವಾ ಗಲಾಟೆ ಮಾಡೋದಾ? ಇದು ಜನರನ್ನು ದಾರಿ ತಪ್ಪಿಸೋ ಯಾತ್ರೆ, ಪ್ರಚೋದನಾಕಾರಿ ಭಾಷಣ ಮಾಡಿ ಎಣ್ಣೆ ಸುರಿಯುವಂತಹಾ ಕೆಲಸ ಮಾಡುತ್ತಿದ್ದಾಯೇ ಹೊರತು ಶಮನ ಮಾಡೋ ಕೆಲಸ ಮಾಡುತ್ತಿಲ್ಲ ಎಂದು ದೂರಿದರು. ಕಾಂಗ್ರೆಸ್ ಹತ್ಯೆ ಮಾಡಿದವರ ಪರ ಯಾವತ್ತೂ ವಕಾಲತ್ತು ಮಾಡಿಲ್ಲ, ಸಾಮರಸ್ಯಕ್ಕಾಗಿ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramanath Rai jana suraksha yatra ಹತ್ಯೆ ಅಪಪ್ರಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ