ಜೆಡಿಎಸ್ ನಿಂದಲೂ ಪಾದಯಾತ್ರೆ

JDS also jumped into padayatra..!

03-03-2018

ಬೆಂಗಳೂರು: ರಾಜ್ಯ ಚುನಾವಣಾ ಕಣ ರಂಗೇರುತ್ತಿದ್ದು ಬಿಜೆಪಿಯವರು ನಗರದ ವಿಧಾನ ಸಭಾಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ, ಇದರ ಬೆನ್ನಲ್ಲೇ ಜೆಡಿಎಸ್ ನವರೂ ಕೂಡ ಪಾದಯತ್ರೆಗೆ ಸಜ್ಜುಗೊಂಡಿದ್ದು ಇದೇ ತಿಂಗಳು 6ರಿಂದ ಹತ್ತು ದಿನಗಳ ಕಾಲ ಪಾದಯಾತ್ರೆಗೆ ಮುಂದಾಗಿದ್ದಾರೆ. ವಿಕಾಸ ಪರ್ವ ಹೆಸರಿನಲ್ಲಿ ಜೆಡಿಎಸ್ ಪಾದಯಾತ್ರೆ ನಡೆಯಲಿದೆ ಎಂದು ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.

ಯಾರಿಂದ ಬೆಂಗಳೂರು ಹದಗೆಟ್ಟಿದೆಯೋ ಅವರೇ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಪಾದಯಾತ್ರೆ ವಿರುದ್ಧ ಶರವಣ ವ್ಯಂಗ್ಯವಾಡಿದ್ದಾರೆ. ಬೆಂಗಳೂರನ್ನು ಲೂಟಿ ಮಾಡಿದ್ದು ಬಿಜೆಪಿ. ಅವರ ಅವಧಿಯಲ್ಲೇ ಪಾಲಿಕೆ ಕಟ್ಟಡಗಳನ್ನು ಅಡಮಾನ ಇಟ್ಟಿದ್ದರು. ಐದು ಸಾವಿರ ಕೋಟಿ ಬೋಗಸ್ ಬಿಲ್ ಸೃಷ್ಟಿ ಮಾಡಿದ್ದು ಬಿಜೆಪಿಯವರು ಎಂದು ಶರವಣ ಆರೋಪಿಸಿದರು. ಕಾಂಗ್ರೆಸ್ ಸಹ ಬೆಂಗಳೂರನ್ನು ಲೂಟಿ ಮಾಡಿದೆ ಎಂದು ಅವರು ದೂರಿದರು.

ಕಳೆದ ತಿಂಗಳು ನಡೆದ ಜೆಡಿಎಸ್ ಸಮಾವೇಶ ನೋಡಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಶುರುವಾಗಿದೆ, ಅದಕ್ಕೆ ಇಷ್ಟ ಬಂದ ಹಾಗೆ ಹೇಳಿಕೆ ಕೊಡಲು ಶುರು ಮಾಡಿದ್ದಾರೆ. ಬೆಂಗಳೂರಿನ ಎಲ್ಲಾ ವಾರ್ಡ್ ಗಳಿಗೆ ಪಾದಯಾತ್ರೆ ಮೂಲಕ ಹೋಗುತ್ತೇವೆ, ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುತ್ತೇವೆ. ಮುಂದೆ ಅಧಿಕಾರಕ್ಕೆ ಬಂದರೆ ಏನೆಲ್ಲ ಕೆಲಸ ಮಾಡ್ತೀವಿ ಅನ್ನೋದನ್ನು ಕೂಡ ಹೇಳುತ್ತೇವೆ ಎಂದು ಟಿ.ಎ.ಶರವಣ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

TA Sharavana JDS ಬೋಗಸ್ ವಿಧಾನ ಪರಿಷತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ