ಕಾವೇರಿಗಾಗಿ ದೇವೇಗೌಡರ ಹೋರಾಟ

Deve Gowda

02-03-2018

ಹಾಸನ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಮತ್ತೆ ತೊಂದರೆ ಎದುರಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮಾಡದೆ, ನಾವೆಲ್ಲರೂ ಒಟ್ಟಾಗಿ ದನಿ ಎತ್ತಬೇಕು, ಒಗ್ಗಟ್ಟಿನ ಬಗ್ಗೆ ತಮಿಳುನಾಡಿನ ರಾಜಕೀಯ ನಾಯಕರನ್ನು ನೋಡಿ ಕಲಿಯಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
ನಾನು ಸದ್ಯದಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡುವೆ, ಇದಕ್ಕಾಗಿಯೇ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಾಹಿತಿ ಕಲೆ ಹಾಕುತ್ತಿದ್ದೇನೆ, ಸಚಿವರ ಭೇಟಿ ವೇಳೆ ಅವರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಡುವೆ, ನಿರ್ವಹಣಾ ಮಂಡಳಿ ರಚನೆ ಕಷ್ಟ ಎಂದು ಜಲಸಂಪನ್ಮೂಲ ಸಚಿವ ಗಡ್ಕರಿ ಹೇಳಿದ್ದರು, ಇದು ರಾಜ್ಯಕ್ಕೆ ತಕ್ಷಣಕ್ಕೆ ಬೀಳಬಹುದಾಗಿದ್ದ ಪೆಟ್ಟನ್ನು ದೂರ ಮಾಡಿದೆ, ಈ ಕಾರಣಕ್ಕೆ ನಾನು ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ.

ನನ್ನ ನಾಡಿನ ಜನರಿಗೆ ಅನುಕೂಲವಾಗುವ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ, ಎಲ್ಲರೂ ಒಗ್ಗೂಡಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ. ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರವಾಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಕಾವೇರಿ ಟ್ರಿಬ್ಯುನಲ್ ನವರು ಹೇಳಿದ್ದನ್ನೇ ಮತ್ತೆ ಕೋರ್ಟ್  ಹೇಳಿದೆ. ಟ್ರಿಬ್ಯುನಲ್ ನವರು ಐದು ವರ್ಷಕೊಮ್ಮೆ ಪರಿಶೀಲನೆಗೆ ಅವಕಾಶ ನೀಡಿದ್ದರು. ಆದರೆ ಸುಪ್ರೀಂ ಕೋರ್ಟ್ 15 ವರ್ಷಕೊಮ್ಮೆ ಎಂದು ಹೇಳಿದೆ, ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ, ಇದರ ಸಾಧಕ ಭಾದಕಗಳ ಬಗ್ಗೆ ರಾಷ್ಟ್ರೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕಿದೆ ಎಂದು ದೇವೇಗೌಡರು ಕಳಕಳಿ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

H.D.Deve Gowda cauvery ಅನುಕೂಲ ಟ್ರಿಬ್ಯುನಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ