ಸಾವು ತಂದ ಡ್ರಿಂಕ್ಸ್ ಪಾರ್ಟಿ

man fallen from 9th floor and died

02-03-2018

ಬೆಂಗಳೂರು: ಕಂಠಮಟ್ಟ ಕುಡಿದ ಪಾರ್ಟಿ ಮಾಡುತ್ತಿದ್ದ 6 ಮಂದಿ ಸ್ನೇಹಿತರಲ್ಲಿ ಓರ್ವ ಅಪಾರ್ಟ್‍ಮೆಂಟ್‍ನ 9ನೇ ಮಹಡಿಯ ಫ್ಲಾಟ್‍ನ ಮುಂಭಾಗದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಬೆಳ್ಳಂದೂರಿನ ಗ್ರೀನ್ ಲೇನ್ ಲೇಔಟ್‍ನ ಶೋಭಾ ಡಿಜೈರ್ ಅಪಾರ್ಟ್‍ಮೆಂಟ್‍ನಲ್ಲಿ ಈ ದುರ್ಘಟನೆ ನಡೆದಿದೆ. ಬಿಹಾರ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಗೌತಮ್ ಝಾ (28) ಮೃತಪಟ್ಟವರಾಗಿದ್ದಾರೆ.

ಕಾಡಬೀಸನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಝಾ, ತಾನು ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಐವರು ಸ್ನೇಹಿತರೊಂದಿಗೆ 9ನೇ ಮಹಡಿಯ ಫ್ಲಾಟ್‍ ಬಳಿ ಕುಡಿದು ಪಾರ್ಟಿ ಮಾಡುತ್ತಿದ್ದರು. ಕುಡಿದ ಅಮಲಿನಿಂದ ಗೌತಮ್ ಝಾ ಫ್ಲಾಟ್‍ಹೊರ ಭಾಗದ ಬಾಲ್ಕಾನಿ ಬಳಿ ಕುಳಿತುಕೊಳ್ಳಲು ಹೋಗಿ ಆಯಾ ತಪ್ಪಿ ಅಲ್ಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Drunk software ಎಂಜಿನಿಯರ್ ಪಾರ್ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ