ಪಾದಯಾತ್ರೆ ಮಾಡೋರು ಸುಳ್ಳೇಳಂಗಿಲ್ಲ!

siddaramaiah reaction on BJP padayatra

02-03-2018

ಬೆಂಗಳೂರು: ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಐದು ವರ್ಷ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ್ದರು, ಆಗ ಬಿಬಿಎಂಪಿ ಫೈಲ್ ಗಳನ್ನೆಲ್ಲ ಸುಟ್ಟು ಹಾಕಿದವರು ಯಾರು? ರಾತ್ರಿ ವೇಳೆಯೇ ಟೆಂಡರ್ ಕರೆದವರು ಯಾರು? ಪಾಲಿಕೆ ಆಸ್ತಿಗಳನ್ನು ಅಡ ಇಟ್ಟವರು ಯಾರು? ಎಂದು ಒಂದರ ಮೇಲೊಂದು ಪ್ರಶ್ನೆಗಳನ್ನು ಹಾಕಿದ್ದಾರೆ. ಬಿಬಿಎಂಪಿಗೆ ಬಿಜೆಪಿಯವರು ಹೊಸದಾಗಿ 110 ಹಳ್ಳಿಗಳನ್ನು ಸೇರಿಸಿದರು, ಆದರೆ ಈ ಹಳ್ಳಿಗಳಿಗೆ ನೀರು, ರಸ್ತೆ ಕೊಟ್ಟರೇ? ಇದನ್ನೆಲ್ಲ ಬಿಜೆಪಿಯವರು ಜನರಿಗೆ ಹೇಳಬೇಕು ಅಲ್ವೇ? ಪಾದಯಾತ್ರೆ ಮಾಡೋರು ಜನರಿಗೆ ಸತ್ಯ ಹೇಳಬೇಕು, ಪಾದಯಾತ್ರೆಯಲ್ಲಿ ಸುಳ್ಳು ಸುಳ್ಳೇ ಪ್ರಚಾರ ಮಾಡೋದಲ್ಲ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

siddaramaiah padayatra ಪಾದಯಾತ್ರೆ ಪ್ರಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ