ಕನ್ನಡದಲ್ಲಿ ರೈಲು ಟಿಕೆಟ್

Train Ticket in Kannada

02-03-2018

ಬೆಂಗಳೂರು: ರಾಜ್ಯದ ಜನತೆಯ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಇನ್ನುಮುಂದೆ ರೈಲ್ವೆ ಟಿಕೆಟ್ ನಲ್ಲಿ ಕನ್ನಡ ಭಾಷೆ ಕಾಣಿಸಿಕೊಳ್ಳಲಿದೆ. ಇಂದಿನಿಂದಲೇ ರಾಜ್ಯದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ  ಕನ್ನಡ ಭಾಷೆಯಲ್ಲಿ ಟಿಕೆಟ್ ವಿತರಣೆ ಆರಂಭವಾಗಿದೆ. ಟಿಕೆಟ್ ನಲ್ಲಿ ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡ ಭಾಷೆಯೂ ಲಭ್ಯವಾಗಿರುವುದು ಕನ್ನಡಿಗರಿಗೆ ಸಂತೋಷ ತಂದಿದೆ. ರೈಲು ಟಿಕೆಟ್ ನಲ್ಲಿ ಯಾವ ನಿಲ್ದಾಣದಿಂದ ಯಾವ ನಿಲ್ದಾಣದವರೆಗೆ, ಪ್ರಯಾಣ ದರ್ಜೆ, ರೈಲಿನ ವಿಧ( ಪ್ಯಾಸೆಂಜರ್- ಎಕ್ಸ್ ಪ್ರೆಸ್) ಬಗ್ಗೆ ಕನ್ನಡದಲ್ಲೇ ಮಾಹಿತಿ ಇರಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

Kannada train ticket ನಿಲ್ದಾಣ ಟಿಕೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ