ಮದ್ಯದಂಗಡಿ ತೆರವಿಗೆ ವಿದ್ಯಾರ್ಥಿನಿಯರ ಆಗ್ರಹ

Students demand to replace bar from hostel

02-03-2018

ಮೈಸೂರು: ವಿದ್ಯಾರ್ಥಿನಿಯರ ಹಾಸ್ಟೆಲ್ ಪಕ್ಕದಲ್ಲೇ ಮದ್ಯದಂಗಡಿ ಇದ್ದು ನಾವು ಕುಡುಕರ ಹಾವಳಿ ಅನುಭವಿಸುವಂತಾಗಿದೆ, ಹೀಗಾಗಿ ಮದ್ಯದಂಗಡಿ ತೆರವುಮಾಡಿಸಬೇಕು ಎಂದು ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ. ನಗರದ ಶಾಂತಲ ಚಿತ್ರಮಂದಿರ ಸಮೀಪ ಅಂಬಾಳೆ ಪಂಡಿತರ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯರು, ತಮ್ಮ ಹಾಸ್ಟೆಲ್ ಪಕ್ಕದ ಕ್ವಾಲಿಟಿ ವೈನ್ಸ್ ತೆರವಿಗೆ ಆಗ್ರಹಿಸಿ, ಕ್ಯಾಂಡಲ್ ಹಿಡಿದುಕೊಂಡು ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಸುಮಾರು 60 ವಿದ್ಯಾರ್ಥಿನಿಯರು ಉಳಿದುಕೊಂಡಿರುವ ಹಾಸ್ಟೆಲ್ ಆಸುಪಾಸಿನಲ್ಲಿ ಕುಡುಕರ ಹಾವಳಿ ಹೆಚ್ಚಿದ್ದು, ನಾವು ಕಿರುಕುಳಕ್ಕೊಳಗಾಗುತ್ತಿದ್ದೇವೆ, ಹೀಗಾಗಿ ಕೂಡಲೇ ಬಾರ್ ತೆರವುಗೊಳಿಸಿ ಎಂದು ಅಬಕಾರಿ ಇಲಾಖೆ, ನಗರಪಾಲಿಕೆ ಮತ್ತು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bar Hostle ಕ್ಯಾಂಡಲ್ ಆಗ್ರಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ