ಆಕ್ಷನ್-ರಿಯಾಕ್ಷನ್

actiomn reaction..!

02-03-2018

ಬೆಂಗಳೂರು: ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ತಿರುಗೇಟುಕೊಡಲು ಕಾಂಗ್ರೆಸ್ ಪಕ್ಷವೂ ಸಜ್ಜಾಗುತ್ತಿದೆ. ಬಿಜೆಪಿಯವರಿಗೆ ಸರಿಯಾಗಿ ಪ್ರತಿಯುತ್ತರ ಕೊಡಲು ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಆಯಾ ಇಲಾಖೆಯ ಸಚಿವರುಗಳು ತಯಾರಿ ನಡೆಸುತ್ತಿದ್ದಾರೆ. ಇಲಾಖೆಗಳ ಮೇಲಿನ ಆರೋಪಗಳಿಗೆ ಸಂಬಂಧಿಸಿದ ಸಚಿವರುಗಳು ಪ್ರತ್ಯುತ್ತರ ಕೊಡಲಿದ್ದಾರೆ, ಇದರ ಜೊತೆಗೆ ಬಿಜೆಪಿ ಅವಧಿಯಲ್ಲಿನ ಹಗರಣ ಬಗ್ಗೆಯೂ ಸಚಿವರುಗಳು ಮಾಹಿತಿಗಳನ್ನು ಬಿಚ್ಚಿಡಲಿದ್ದಾರೆ.

ಬಿಜೆಪಿಯನ್ನು ಮಣಿಸಲು ಹೊರಟಿರುವಂತಿರುವ ಕಾಂಗ್ರೆಸ್ ಪಕ್ಷ, ಇನ್ನು ಮುಂದೆ ಪ್ರತಿ ದಿನ ಒಬ್ಬರು ಸಚಿವರು ಸುದ್ದಿಗೋಷ್ಠಿ ನಡೆಸಿ, ಬಿಜೆಪಿಗೆ ತಿರುಗೇಟು ಕೊಡಲು ಸೂಚಿಸಿದೆ. ಅದರಂತೆ, ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಾಳೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಸೋಮವಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

press meet congress ಸುದ್ದಿಗೋಷ್ಠಿ ಇಲಾಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ