ದಾವಣಗೆರೆಯಲ್ಲಿ ಹೋಳಿ ಸಂಭ್ರಮ

Holi celebrations in davanagere

02-03-2018

ದಾವಣಗೆರೆ: ದಾವಣಗೆರೆಯಲ್ಲಿ ಹೋಳಿ ಹಬ್ಬದ ಸಂಭ್ರಮಾಚರೆಣೆಯಲ್ಲಿ ಜನ ಮುಳುಗಿದ್ದಾರೆ. ಪರಸ್ಪರ ಬಣ್ಣ ಎರಚಿಕೊಂಡು ರಂಗಿನ ಹಬ್ಬ ಆಚರಿಸುತ್ತಿರುವ ಯುವಕ,ಯುವತಿಯರು,ಮಕ್ಕಳು ಸಂತಸದಿಂದ ಬಣ್ಣದಲ್ಲಿ ಮಿಂದೆದ್ದರು. ಹೋಳಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾತ್ರಿ 12ಗಂಟೆ ವರೆಗೆ ಮಾತ್ರ ಬಣ್ಣ ಆಡಲು ಪೊಲೀಸ್ ಇಲಾಖೆ ಅವಕಾಶ ನೀಡಿದೆ. ಒತ್ತಾಯ ಪೂರ್ವಕವಾಗಿ ಬಣ್ಣ ಹಾಕುವುದು, ಪರೀಕ್ಷೆಗೆ ಹೋಗುವವರಿಗೆ ತೊಂದರೆ ಕೊಡುವುದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು  ಎಚ್ಚರಿಕೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Holi police ಹುಣ್ಣಮೆ ಕಠಿಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ