ಉದ್ಯೋಗಕ್ಕೆ ಆಯ್ಕೆಯಾಗದಿದ್ದರಿಂದ ನೊಂದ ಪದವೀಧರನೊಬ್ಬ ನೇಣಿಗೆ ಶರಣು

Kannada News

03-05-2017

ಬೆಂಗಳೂರು - ಗಿರಿನಗರದ ಬಿಎಸ್‍ಕೆ ಮೂರನೇ ಹಂತದ ದ್ವಾರಕಾನಗರದಲ್ಲಿ  ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗದಿದ್ದರಿಂದ ನೊಂದ ಪದವೀಧರನೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಮಗಳವಾರ ನಡೆದಿದೆ.
ದ್ವಾರಕಾನಗರದ 5ನೇ ಕ್ರಾಸ್ನ ವಕೀಲೆ ಮಂಗಳ ಅವರ ಪುತ್ರ ಅರ್ಪಿತ್ (21) ಆತ್ಮಹತ್ಯೆ ಮಾಡಿಕೊಂಡವರು. ಪಿ.ಎಸ್. ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಇತ್ತೀಚೆಗಷ್ಟೇ ಅರ್ಪಿತ್ ಮುಗಿಸಿದ್ದರು.
ಕಾಲೇಜಿನಲ್ಲಿ ಕೆಲದಿನಗಳ ಹಿಂದೆ ನಡೆದ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಉದ್ಯೋಗಕ್ಕೆ ಆಯ್ಕೆಗೊಳ್ಳದಿದ್ದರಿಂದ ನೊಂದಿದ್ದ ಅರ್ಪಿತ್, ನಿನ್ನೆ ತಾಯಿ ಕೆಲಸಕ್ಕೆ ಹೋಗಿ  ಒಂಟಿಯಾಗಿದ್ದಾಗ ಮಧ್ಯಾಹ್ನ 4ರ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ