ಬೆಂಗಳೂರನ್ನು ಹಾಳು ಮಾಡಿಬಿಟ್ಟಿದ್ದಾರೆ!

Prakash javadekar and BBMP

01-03-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಆಡಳಿತದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ  ಕೋಟ್ಯಂತರ ರೂಪಾಯಿ ಹಗರಣವನ್ನು ಬಿಂಬಿಸುವ 20 ಪುಟಗಳ ಆರೋಪ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಆರೋಪ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಬಿಬಿಎಂಪಿ ನಿರ್ಲಕ್ಷ್ಯದ ಕುರಿತು ನಗರದ ನಾಗರಿಕರಲ್ಲಿ ಅರಿವು ಮೂಡಿಸಲು ನಾಳೆಯಿಂದ ನಗರದ 28 ವಿಧಾನಸಭಾ ಕ್ಷೇತ್ರಗಳ 198 ವಾರ್ಡ್ಗಳಲ್ಲಿ 14 ದಿವಸ ಪಾದಯಾತ್ರೆ ನಡೆಸುತ್ತೇವೆ ಎಂದರು.

ಈ ಪಾದಯಾತ್ರೆಯಲ್ಲಿ ಕೇಂದ್ರ ಸಚಿವರು, ಬಿಜೆಪಿ ಸಂಸದರು, ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಭಾಗವಹಿಸಲಿದ್ದು, ಕಾಂಗ್ರೆಸ್ ಆಡಳಿತದ ಬಿಬಿಎಂಪಿಯಲ್ಲಿನ ಹಗರಣದ ಕುರಿತು ತಿಳಿಸುವ ಜೊತೆಗೆ, ತಮ್ಮ ಸರ್ಕಾರ  ಅಧಿಕಾರಕ್ಕೆ ಬಂದರೆ ಕೆರೆಗಳ ಸುಧಾರಣೆಗೆ ಅಲ್ಪ, ಮಧ್ಯಮ ಹಾಗೂ ದೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರಲಿದೆ ಎಂಬ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು. ಕೆರೆಗಳು, ಉದ್ಯಾನಗಳು ಮತ್ತು ಮಾಹಿತಿ ತಂತ್ರಜ್ಞಾನದಿಂದಾದಾಗಿ ಖ್ಯಾತಿ ಹೊಂದಿದ್ದ ಬೆಂಗಳೂರನ್ನು ತ್ಯಾಜ್ಯ ನಗರಿ, ಗೂಂಡಾ ನಗರಿ, ಕೆರೆಗಳಿಗೆ ಬೆಂಕಿ ಹೊತ್ತಿಸುವ ನಗರಿ ಹಾಗೂ ಮಹಿಳೆಯರಿಗೆ ಅಸುರಕ್ಷಿತವಾಗಿರುವ ನಗರಿಯಾಗಿ ಪರಿವರ್ತಿಸಲಾಗಿದೆ ಎಂದು ಪ್ರಕಾಶ್ ಜಾವಡೇಕರ್ ದೂರಿದರು.


ಸಂಬಂಧಿತ ಟ್ಯಾಗ್ಗಳು

Prakash javadekar BBMP ನಾಗರಿಕ ಹಗರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ