ಎಲೆಕ್ಷನ್ ಮೂಡಿನಲ್ಲಿ ಹೆಚ್ಡಿಕೆ...

Hd kumaraswamy vikas yatra in hiriyur

01-03-2018

ಚಿತ್ರದುರ್ಗ: ಹಿರಿಯೂರಿನಲ್ಲಿ ಹಮ್ಮಿಕೊಂಡಿದ್ದ ಕುಮಾರ ಪರ್ವ ಯಾತ್ರೆಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ  ಹೆಚ್.ಡಿ.ಕುಮಾರ ಸ್ವಾಮಿ, ನನ್ನ ಆರೋಗ್ಯಕ್ಕಿಂತ ನಾಡಿನ ತಾಯಂದಿರ ಸಮಸ್ಯೆ, ಯವಕರ ನಿರುದ್ಯೋಗದ ಸಮಸ್ಯೆ, ರೈತರ ನೀರಾವರಿ ಸಮಸ್ಯೆ ನನಗೆ ಮುಖ್ಯ ಎಂದಿದ್ದಾರೆ. ಬಿತ್ತಿದ ಬೀಜ ಮೊಳಕೆ ಒಡೆಯದೆ ರೈತರು ನಷ್ಟ ಅನುಭವಿಸಿದ್ದಾರೆ, ಕಳೆದ ಜೂನ್ ನಲ್ಲಿ ಸಿದ್ದರಾಮಯ್ಯ ಸರ್ಕಾರ, ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ ಸಾಲ ಮನ್ನಾ ಯೋಜನೆ ಜಾರಿಗೆ ತಂದಿತ್ತು. ಆದರೆ, ಇವತ್ತಿನವರೆಗೂ ಹಣ ಬಂದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ಆರೋಪ ಮಾಡಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರು ಮಾಡಿರುವ 51 ಸಾವಿರ ಕೋಟಿ ರೂಪಾಯಿ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ, 10 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಜಾರಿಗೆ ತರುತ್ತೇನೆ, ಗರ್ಭಿಣಿಯರಿಗೆ, ವೃದ್ದರಿಗೆ ವಿಶೇಷ ಯೋಜನೆ ಜಾರಿಗೆ ತರುತ್ತೇನೆ ಎಂದು ಕುಮಾರ ಸ್ವಾಮಿ ಮತದಾರರಿಗೆ ಆಶ್ವಾಸನೆ ನೀಡಿದ್ದಾರೆ. 

ಸಿಎಂ ಆಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿ ಗಾಂಧೀಜಿಯವರ ಕನಸು ನನಸು ಮಾಡಿದ್ದೇನೆ ಹೊರತು, ಮರಳು ದಂಧೆ ಮಾಡಿಲ್ಲ, ಹಣ ಮಾಡಿಕೊಂಡಿಲ್ಲ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಯಡಿಯೂರಪ್ಪ ನವರಿಗೆ ರೈತ ಬಂಧು ಎಂಬ ಬಿರುದು ನೀಡಿದ್ದಾರೆ, ಆದರೆ ಯಡಿಯೂರಪ್ಪ ಅವರು ಒಂದೇ ಒಂದು ರೈತ ಪರ ಕೆಲಸ ಮಾಡಿಲ್ಲ ಎಂದು ದೂರಿದರು. ನಾನು ಮುಖ್ಯಮಂತ್ರಿ ಆದರೆ, ಅದು ನಾನಲ್ಲ ರಾಜ್ಯದ ಜನರೇ ಮುಖ್ಯಮಂತ್ರಿಗಳು ಎಂದು ಹೇಳಿದ ಕುಮಾರ ಸ್ವಾಮಿ, ಐದು ತಿಂಗಳ ಹಿಂದೆ ಇಸ್ರೇಲ್ ಗೆ ಹೋಗಿ ಅಧ್ಯಯನ ಮಾಡಿಕೊಂಡು ಬಂದಿದ್ದೇನೆ, ಅಲ್ಲಿಯ ರೈತರು ವಿಶ್ವಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟರು.


ಸಂಬಂಧಿತ ಟ್ಯಾಗ್ಗಳು

HD kumaraswamy Isrel ಸಹಕಾರಿ ಬ್ಯಾಂಕು ವಿಶ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ