ಹುಬ್ಬಳ್ಳಿಯ ಸಂತೋಷನಗರದಲ್ಲಿ ಸಾವನ್ನಪ್ಪಿದ ಲಕ್ಷಾಂತರ ಮೀನುಗಳು

Kannada News

03-05-2017 350

ಹುಬ್ಬಳ್ಳಿ:-ಕೆರೆಯ ಅಭಿವೃದ್ಧಿ ಗಾಗಿ ಕೆರೆಯಲ್ಲಿನ ನೀರು ಹೊರ ಹಾಕಿದ ಪರಿಣವಾಗಿ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ನೀರಿಲ್ಲದೇ ಒದ್ದಾಡಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಸಂತೋಷನಗರದಲ್ಲಿ ನಡೆದಿದೆ.ಪಾಲಿಕೆಯ ನಿಲ೯ಕ್ಷಕ್ಕೆ ಸಾವ೯ಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದು ಹುಬ್ಬಳ್ಳಿಯ ಸಂತೋಷ ನಗರದ ಕೆರೆ ಇಲ್ಲಿ ಲಕ್ಷಾಂತರ ಮೀನುಗಳು ಇವೆ...ಆದರೆ ಮಹಾನಗರ ಪಾಲಿಕೆ ಕಳೆದ ಮೂರ್ನಾಲ್ಕು ದಿನಗಳಿಂದ ಕೆರೆ ಅಭಿವೃದ್ಧಿಗಾಗಿ ಕಾಮಗಾರಿ ನಡೆಯುತ್ತಿದೆ...ಅದಕ್ಕಾಗಿ ಕೆರೆಯಲ್ಲಿಯ ನೀರನ್ನು ಪಂಪಸೆಟ್ ಮೂಲಕ ಹೊರಹಾಕಲಾಗುತ್ತಿದೆ..ಹೀಗಾಗಿ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ನೀರಿಲ್ಲದೇ ವಿಲ ವಿಲ ಒದ್ದಾಡಿ ಸಾವನ್ನಪ್ಪಿವೆ...ಮಹಾನಗರ ಪಾಲಿಕೆಯ ಕೆರೆ ಅಭಿವೃದ್ಧಿ ಪಡಿಸುವ ಮುನ್ನವೇ ಕೆರೆಯಲ್ಲಿದ್ದ ಮೀನುಗಳನ್ನು ಹರಾಜು ಮಾಡಬೇಕಿತ್ತು... ಇಲ್ಲವೇ ಮೀನುಗಳನ್ನು ಬೇರೇ ಕೆರೆಗಳಿಗೆ ಸ್ಥಳಾಂತರಿಸಬೇಕಿತ್ತು ಇದ್ಯಾವುದನ್ನೂ ಮಾಡದೇ ಅಧಿಕಾರಿಗಳು ತಮ್ಮ ನಿಲ೯ಕ್ಷ್ಯದಿಂದ ಲಕ್ಷಾಂತರ ಮೀನುಗಳ ಮಾರಣ ಹೋಮಕ್ಕೆ ಕಾರಣರಾಗಿದ್ದಾರೆ..ಅಧಿಕಾರಿಗಳ ನಿಲ೯ಕ್ಷ್ಯದಿಂದ ಸತ್ತು ಮೀನುಗಳ ಮೇಲೆಯ ಕಾಮಗಾರಿ ಮಾಡುತ್ತಿರುವ ಜೆಸಿಬಿ ಮತ್ತು ಟಿಪ್ಪರಗಳು ಓಡಾಡುತ್ತಿರುವುದರಿಂದ ಅದರ ವಾಸನೆ ಸುತ್ತಲಿನ ಪರಿಸರವನ್ನೂ ಹಾಳು ಮಾಡಿದೆ...ಹೀಗಾಗಿ ಸುತ್ತಲಿನ ನಿವಾಸಿಗಳು ದುನಾ೯ತದಿಂದ ಕಾಲ ಕಳೆಯುವಂತಾಗಿದೆ...ಅಷ್ಟೇ ಅಲ್ಲದೇ ಕೆರೆಯ ಪಕ್ಕದಲ್ಲಿಯೇ ಇದೇ ಕ್ಷೇತ್ರದ ಶಾಸಕ ಪ್ರಸಾದ್ ಅಬ್ನಯ್ಯ ಅವರ ನಿವಾಸವಿದ್ದರೂ ಸಹ ಅವರೂ ಈ ಮೀನುಗಳ ಮಾರಣ ಹೋಮದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲಾ ಎಂದು ಸಾವ೯ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತತ ಬರಗಾಲದಿಂದ ಮೊದಲೇ ನೀರಿಲ್ಲದೇ ಜಲಚರಗಳು ಸಾವನ್ನಪ್ಪುತ್ತಿವೆ..ಇದರ ಮದ್ಯೆ ಇದ್ದ ಮೀನುಗಳನ್ನು ಪಯಾ೯ಯವಾಗಿ ಬೇರೇ ಕೆರೆಗಳಿಗೆ ಸ್ಥಳಾಂತರಿಸುವುದನ್ನು ಬಿಟ್ಟು ಮೀನುಗಳ ಮಾರಣ ಹೋಮಕ್ಕೆ ಕಾರಣರಾದ ಮಹಾನಗರ ಪಾಲ ಿಕೆಯ ಅಧಿಕಾರಿಗಳ ಮೇಲೆ ಕ್ರಮ ಕ್ಯೆಕೊಳ್ಳಬೇಕೆಂದು ಸಾವ೯ಜನಿಕರು ಆಗ್ರಹಿಸಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ