ಅಜ್ಜಿ ಸೀರೆಯಿಂದ ಮೊಮ್ಮಗಳ ಆತ್ಮಹತ್ಯೆ

Teen girl commit suicide by grandmother saree

01-03-2018

ಬೆಂಗಳೂರು: ಪ್ರೀತಿಸಿದ ಯುವಕನ ಜೊತೆ ಮಾತನಾಡುವುದನ್ನು ಬಿಡಿಸಿ, ಕರೆತಂದಿದ್ದರಿಂದ ನೊಂದ ಯುವತಿಯೊಬ್ಬಳು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕೋಣನಕುಂಟೆಯ ಪಿಳ್ಳಗಾನಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪಿಳ್ಳಗಾನಹಳ್ಳಿಯ ಸುಮತಿ (18) ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದ ಸುಮತಿ ಅಲ್ಲಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನ ಜೊತೆ ಮಾತನಾಡುವುದನ್ನು ಬಿಡಿಸಿ, ಪಿಳ್ಳಗಾನಹಳ್ಳಿಯಲ್ಲಿದ್ದ ಅಜ್ಜಿಯ ಮನೆಗೆ ತಂದೆ ರಾಮು ತಂದಿಟ್ಟಿದ್ದರು. ಕೆಲವು ದಿನಗಳಿಂದ ಅಜ್ಜಿ ಮನೆಯಲ್ಲಿದ್ದ ಆಕೆ ಪ್ರೀತಿಸಿದ ಹುಡುಗನ ಜೊತೆ ಮಾತನಾಡಲು ಸಾಧ್ಯವಾಗದಿದ್ದರಿಂದ ನೊಂದು ಅಜ್ಜಿಯ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

love suicide ಸೀರೆ ಅಜ್ಜಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ