ಬಾತ್ ರೂಮ್ ನಲ್ಲಿ ಕ್ಯಾಮರಾ ಇಟ್ಟ..

Camera in the bathroom ..

01-03-2018

ಬೆಂಗಳೂರು: ಪಕ್ಕದ ಮನೆಯವರ ಬಾತ್ ರೂಮ್ನಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಬಿಳೇಕಹಳ್ಳಿಯ ಸಾರ್ವಭೌಮನಗರದ ಜೀವನ್ ಸೇಠ್(46)ನನ್ನು ಮೈಕೊ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ. ಕಾರುಗಳ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ ಈ ಕಾಮುಕ, ತನ್ನ ಮನೆಯ ಪಕ್ಕಕ್ಕೆ ಹೊಂದಿಕೊಂಡಂತಿದ್ದ ಮನೆಯ ಸ್ನಾನದ ಕೋಣೆಯ ಕಿಟಕಿಗೆ ಕ್ಯಾಮರಾ ಫಿಕ್ಸ್ ಮಾಡಿದ್ದಾನೆ. ಆದರೆ, ಸ್ನಾನಕ್ಕೆ ಬಂದ ಮಹಿಳೆಯ ಕಣ್ಣಿಗೆ ಇದು ಕಂಡುಬಂದಿದ್ದು ಪತಿಗೆ ವಿಷಯ ತಿಳಿಸಿದ್ದಾರೆ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಜೀವನ್ ಸೇಠ್ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆ ಬಳಿಕ ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ಪೊಲೀಸರು ವಿಚಾರಿಸಿದಾಗ ಆರೋಪಿ ಜೀವನ್ ಸೇಠ್ ತಪ್ಪೊಪ್ಪಿಕೊಂಡಿದ್ದಾನೆ. ಈತ ವಿವಾಹಿತನಾಗಿದ್ದು, ಒಂದು ಮಗುವಿನ ತಂದೆ ಎನ್ನುವುದು ಗೊತ್ತಾಗಿದೆ.


ಸಂಬಂಧಿತ ಟ್ಯಾಗ್ಗಳು

camara Bathroom ಕಿಟಕಿ ಕಾಮುಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ