ಪರೀಕ್ಷೆ ಮಧ್ಯೆ ಮಂಕಾದ ಹೋಳಿ...

Holi celebrations in bangalore

01-03-2018

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಣ್ಣದ ಹಬ್ಬ ಹೋಳಿ ಸಂಭ್ರಮ ಹೆಚ್ಚಾಗಿದೆ. ಮಕ್ಕಳು, ವಯಸ್ಕರು ಹೀಗೆ ಬಹುತೇಕ ಮಂದಿ ಬೀದಿಗಿಳಿದು ಎರಡು ದಿನ ಕಾಲ ಬಣ್ಣ ಎರಚಾಡುತ್ತಾ ಹೋಳಿಯಾಟದಲ್ಲಿ ಮುಳುಗಿದ್ದರು. ಬೆಳಗ್ಗಿನಿಂದಲೇ ಬಣ್ಣ ಎರಚಾಡುವ ಪ್ರಕ್ರಿಯೆ ಆರಂಭವಾಗಿದೆ. ಕಳೆದ ವರ್ಷಗಳಂತೆ ಈ ವರ್ಷವೂ ಹಲವು ಸಂಘ, ಸಂಸ್ಥೆಗಳು ವಿಶೇಷವಾಗಿ ಬಣ್ಣದ ಹಬ್ಬ ಆಯೋಜಿಸಿದ್ದು ಯುವಕ,ಯುವತಿಯರು ಪಾಲ್ಗೊಂಡಿದ್ದಾರೆ. ಖಾಸಗಿ ಪಂಚತಾರಾ ಹೋಟೆಲ್‍ಗಳಲ್ಲಿ ಕೂಡ ಬಣ್ಣದ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿತ್ತು.

ಉತ್ತರ ಭಾರತೀಯರು ವಾಸವಾಗಿರುವ ಪ್ರದೇಶಗಳಲ್ಲಿ ಹಬ್ಬದ ಆಚರಣೆ ಜೋರಾಗಿದೆ. ಕೆಲವೆಡೆ ಜನ ಬೀದಿಗಿಳಿದು ಆಚರಣೆಯಲ್ಲಿ ತೊಡಗಿದ್ದರೆ, ಮತ್ತೆ ಕೆಲವೆಡೆ ಸಾಂಪ್ರದಾಯಿಕವಾಗಿ ಬಣ್ಣದ ಹಬ್ಬ ಆಚರಿಸುತ್ತಿದ್ದಾರೆ. ವಿವಿಧ ಕಂಪನಿಗಳು ವಾರದ ಮಧ್ಯೆ ಬಂದಿರುವ ಹೋಳಿ ಹಬ್ಬ ಆಚರಣೆಗೆ ರಜೆ ನೀಡಿದಿರುವುದು ಕೆಲವರಿಗೆ ಬೇಸರ ಎನ್ನಿಸಿದೆ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ ಇಂದು ಆರಂಭವಾಗಿದ್ದು, ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಇದರಿಂದ ಪ್ರತಿ ವರ್ಷ ಕಾಲೇಜುಗಳ ಎದುರು ಕಂಡು ಬರುತ್ತಿದ್ದ ಹೋಳಿ ಸಂಭ್ರಮ ಈ ಬಾರಿ ಮಂಕಾಗಿದೆ.

ನಗರದ ವಿವಿಧೆಡೆ ವಾರದ ದಿನವಾದರೂ ಕೆಲವರು ಬಿರು ಬೇಸಿಗೆ ವಾತಾವರಣದಲ್ಲೇ ರಸ್ತೆಗಿಳಿದು ಸಂಭ್ರಮಿಸಿದ್ದಾರೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಪ್ರಮಾಣ ಬಹಳ ಕಡಿಮೆ ಇದೆ. ಅಲ್ಲದೇ ಪೊಲೀಸರು ಕೂಡ ವಿಶೇಷ ಗಸ್ತು ತಿರುಗುತ್ತಿದ್ದು, ಅನಗತ್ಯ ಕಲಹ, ರಸ್ತೆ ಮಧ್ಯ ಸಂಭ್ರಮಾಚರಣೆ, ಗುಂಪು ಸೇರಿ ಜನಸಾಮಾನ್ಯರಿಗೆ ಬಣ್ಣ ಎರಚಲು ಮುಂದಾಗುವುದನ್ನು ತಡೆಯುತ್ತಿದ್ದಾರೆ. ಹೀಗಾಗಿ ಹಲವು ಕಡೆ ಸಂಭ್ರಮಕ್ಕೆ ತಡೆ ಉಂಟಾಗಿದೆ.


ಸಂಬಂಧಿತ ಟ್ಯಾಗ್ಗಳು

Holi weekend ಜನಸಾಮಾನ್ಯ ಪಿಯುಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ