ಪಿಡಿಒ ಆತ್ಮಹತ್ಯೆ ಯತ್ನ

Kannada News

03-05-2017

ಮಂಡ್ಯ:-ಗ್ರಾಪಂ ಸದಸ್ಯನಿಂದ ಕಿರುಕುಳ ಆರೋಪ ಹಿನ್ನೆಲೆ ಪಿಡಿಒ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು .ಯಲಿಯೂರು ಗ್ರಾಪಂ ಪಿಡಿಒ ಶ್ರೀನಿವಾಸಯ್ಯ ಎಂಬುವವರಿಂದ ಆತ್ಮಹತ್ಯೆಗೆ ಯತ್ನ. ಮಂಡ್ಯ ತಾಲೂಕಿನ ಯಲಿಯೂರು. ಯಲಿಯೂರು ಗ್ರಾಮ ಪಂಚಾಯ್ತಿ ಸದಸ್ಯ ವೈ.ಎಂ. ರಾಮಲಿಂಗಯ್ಯ ರವರಿಂದ ಕಿರುಕುಳ ಹಾಗೂ ಮಾನಸಿಕ ಒತ್ತಡದ ಆರೋಪ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸಿ, ತಾವು ಹೇಳಿದ ಕೆಲಸ ನಿರ್ವಹಿಸುವಂತೆ ಒತ್ತಡ ಹೇರಿದ್ದ ಕಾರಣ ಪಿಡಿಒ ಆತ್ಮಹತ್ಯೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರೋ ಪಿಡಿಒ ಶ್ರೀನಿವಾಸಯ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ