ಸ್ಟೀರಿಂಗ್ ಕಟ್: ಬಸ್ ಪಲ್ಟಿ

6 people injured in Bus accident

01-03-2018

ಬಾಗಲಕೋಟೆ: ಬಾಗಲಕೋಟೆಯ ಸರ್ಕಾರಿ ಬಸ್ ಸ್ಟೀರಿಂಗ್ ಕಟ್ ಆಗಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿವೆ. ಜಿಲ್ಲೆಯ ಸಾವಳಗಿ ಬಳಿ ಬಸ್ ಹಳ್ಳಕ್ಕೆ ಬಿದ್ದಿದೆ. ಸಾವಳಗಿಯಿಂದ ತುಂಗಳ ಗ್ರಾಮಕ್ಕೆ ಹೊರಟಿದ್ದ ಬಸ್, ಪ್ರಯಾಣದ ವೇಳೆ ದಿಢೀರ್ ಸ್ಟೇರಿಂಗ್ ಕಟ್ ಆಗಿದ್ದರ ಪರಿಣಾಮ ಅವಘಡ ಸಂಭಿವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾನಂತರ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಬಾರದ ಆಂಬುಲೆನ್ಸ್ ವಿರುದ್ಧ ಗಾಯಾಳುಗಳು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Govt Bus injured ಸ್ಥಳೀಯ ಆಂಬುಲೆನ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ