ಅನಧಿಕೃತ ಕಸಾಯಿಖಾನೆ ಪರೀಕ್ಷಿಸಿದ ಮೇನಕಾ ಗಾಂಧಿ

Maneka Gandhi examined unauthorized slaughterhouse

01-03-2018

ಬೆಳಗಾವಿ: ಅನಧಿಕೃತ ಕಸಾಯಿಖಾನೆ ಪ್ರದೇಶಕ್ಕೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಟೋ ನಗರದಲ್ಲಿರುವ ಕಸಾಯಿ ಖಾನೆಗಳನ್ನು ನೋಡಲು ತೆರಳುವ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಪೋಲಿಸರು ಮೇನಕಾ ಗಾಂಧಿಗೆ ಪ್ರವೇಶ ನಿರಾಕರಿಸಿದ ಘಟನೆಯೂ ನಡೆಯಿತು. ಈ ವೇಳೆ, ಪೋಲಿಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆಯಿತು. ಕೊನೆಗೆ ಕಸಾಯಿಖಾನೆ ಪ್ರವೇಶಕ್ಕೆ ಪೋಲಿಸರು ಅನುಮತಿ ನೀಡಿದರು. ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು  ಸಂಸದರಾದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೇಂದ್ರ ಸಚಿವೆ ಮೆನಕಾ ಗಾಂಧಿಯವರ ಜೊತೆಗಿದ್ದರು.


ಸಂಬಂಧಿತ ಟ್ಯಾಗ್ಗಳು

Maneka Gandhi Law ಪೋಲಿಸ್ ವಿಪಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ