ಜಾತಿಯ ಭೂತದ ಕ್ರೂರ ನರ್ತನ..

cruelty of casteism...

01-03-2018

ಮೈಸೂರು: ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ತಂದೆಯೇ ಕೊಲೆಗೈದು ಸುಟ್ಟುಹಾಕಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಗೊಲ್ಲನಬೀಡು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಸುಮ (18) ಹೈಸ್ಕೂಲ್  ಓದುವ ವೇಳೆ ಆಲನಹಳ್ಳಿ ಗ್ರಾಮದ ದಲಿತ ಯುವಕ ಉಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಕಳೆದ ವರ್ಷ ಉಮೇಶ್ ಮತ್ತು ಸುಮಾ ಮನೆ ಬಿಟ್ಟು ಓಡಿಹೋಗಿದ್ದರು. ಆ ಬಳಿಕ ರಾಜಿ ಸಂಧಾನದ ಮೂಲಕ ಈ ಜೋಡಿಯನ್ನು ಬೇರ್ಪಡಿಸಲಾಗಿತ್ತು. ನಂತರ ಸಂಬಂಧಿಕರ ಮನೆಯಲ್ಲಿದ್ದ ಸುಮಾಳನ್ನು ಕಳೆದ ಫೆಬ್ರವರಿ 21 ರಂದು ಮನೆಗೆ ಕರೆತಂದು, ವಿಷ ಉಣಿಸಿ ನಂತರ ನೇಣಿಗೆ ಹಾಕಿ ಕ್ರೂರವಾಗಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ. ಈ ಕೊಲೆ ಬಗ್ಗೆ ಎಸ್ಪಿ ಕಚೇರಿಗೆ ಅನಾಮಧೇಯ ಪತ್ರ ಬಂದ ನಂತರ, ಪೊಲೀಸರು ಯುವತಿಯ ತಂದೆ ಕುಮಾರ್ ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cast Murder ಸಂಬಂಧಿ ದಲಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ