ಢೋಂಗಿ ಯಾತ್ರೆ?

pramod muthalik against BJP yatra..!

01-03-2018

ಮಂಗಳೂರು: ಬಿಜೆಪಿಯದ್ದು ಜನಸುರಕ್ಷಾ ಯಾತ್ರೆ ಅಲ್ಲ, ಅದು ಅಧಿಕಾರ ಸುರಕ್ಷಾ ಯಾತ್ರೆ, ಢೋಂಗಿ ಯಾತ್ರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಬಿಜೆಪಿಯವರಿಗೆ ಹಿಂದೂ ಕಾರ್ಯಕರ್ತರು ಮತ್ತು ಸಂಘಟನೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಮುತಾಲಿಕ್ ದೂರಿದ್ದಾರೆ. 1997ರಲ್ಲೇ ಭಟ್ಕಳದಲ್ಲಿ 21 ಮಂದಿ ಹಿಂದೂಗಳ ಕೊಲೆಯಾಗಿತ್ತು, ಅದೇ ಭಟ್ಕಳದಲ್ಲಿ ಬಿಜೆಪಿಯವರೇ ಅಧಿಕಾರದಲ್ಲಿದ್ದಾಗ ಬಿಜೆಪಿ ತಾಲ್ಲೂಕು ಅಧ್ಯಕ್ಷ ತಿಮ್ಮಪ್ಪ ಕೊಲೆಯಾಗಿತ್ತು, ಆರೋಪಿಗಳು ಇನ್ನೂ ಸಿಕ್ಕಿಲ್ಲ. ಆದರೆ, ಇದೀಗ ಬಿಜೆಪಿಯವರು ಜನ ಸುರಕ್ಷೆ ಹೆಸರಿನಲ್ಲಿ, ಅಧಿಕಾರದ ಸುರಕ್ಷತೆಗಾಗಿ ಹಿಂದೂ ಸಂಘಟನೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಮುತಾಲಿಕ್  ಕೆಂಡ ಕಾರಿದರು.


ಸಂಬಂಧಿತ ಟ್ಯಾಗ್ಗಳು

pramod muthalik Sri Ram Sena ಭಟ್ಕಳ ಅಧಿಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ