ಬುದ್ಧಿವಾದ ಹೇಳಿದ್ದಕ್ಕೆ ಅಣ್ಣನ ಕೊಲೆ

Elder brother killed by younger brother in belagavi

01-03-2018

ಬೆಳಗಾವಿ: ಬುದ್ದಿವಾದ ಹೇಳಿದ್ದಕ್ಕೆ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ್ದಾನೆ. ಘಟನೆಯು ಬೆಳಗಾವಿಯ ಮುಗಳಖೋಡ ಪಟ್ಟಣದ ದಾಸರ ತೋಟದಲ್ಲಿ ನಡೆದಿದೆ. ಅಣ್ಣ ವಿಠ್ಠಲ ಗೋಕಾಕ(27) ನನ್ನು ತಮ್ಮನಾದ ಶಿವಾನಂದ ಗೋಕಾಕ(25) ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ತನ್ನ ಮದುವೆಗೆಂದು ಕೂಡಿಟ್ಟಿದ್ದ ಹಣ ಕುಡಿದು-ಕುಡಿದು ಹಾಳು ಮಾಡುತ್ತಿದ್ದ ಶಿವಾನಂದನಿಗೆ ಅಣ್ಣ ಬುದ್ಧಿವಾದ ಹೇಳಿದ್ದಾನೆ. ಆದರೆ ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಅಣ್ಣನನ್ನು ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಶಿವಾನಂದನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Murdr Brother ಆರೋಪಿ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ