ಜೀವ ಹೆಚ್ಚೊ ವಾಹನ ಹೆಚ್ಚೋ?

pregnant lady and ambulance

28-02-2018

ಮಂಡ್ಯ: 108 ಆಂಬುಲೆನ್ಸ್ ಸಿಬ್ಬಂದಿ ಆಪತ್ಕಾಲದಲ್ಲಿ ಒದಗುವ ಜೀವರಕ್ಷಕ. ಆದರೆ ಇಲ್ಲೊಂದು ಕಡೆ, ಈ  08 ಆಂಬುಲೆನ್ಸ್ ಸಿಬ್ಬಂದಿ ತಮ್ಮ ಬೇಜವಾಬ್ದಾರಿಯುತ ನಡವಳಿಕೆಯಿಂದಾಗಿ ಗರ್ಭಿಣಿಯ ಜೀವದ ಜೊತೆ ಚೆಲ್ಲಾಟವಾಡಿದ ಘಟನೆ ನಡೆದಿದೆ.

ಗರ್ಭಿಣಿಯೊಬ್ಬರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಂಡ್ಯದ ಕೆ.ಆರ್.ಪೇಟೆಯಿಂದ ಮೈಸೂರಿಗೆ 108 ಆಂಬುಲೆನ್ಸ್ ನಲ್ಲಿ ಕರೆತರಲಾಗುತ್ತಿತ್ತು. ಶ್ರೀರಂಗಪಟ್ಟಣ ಚೆಕ್ ಪೋಸ್ಟ್ ಬಳಿ ಎದುರಿನಿಂದ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್ ಜಖಂಗೊಂಡಿತ್ತು. ಈ ವೇಳೆ ಗರ್ಭಿಣಿಯನ್ನು ಬೇರೆ ವಾಹನದಲ್ಲಿ ಆಸ್ಪಕ್ರೆಗೆ ಸಾಗಿಸುವ ಬದಲು, ಅಪಘಾತವಾದ ವಾಹನ ಪರಿಶೀಲನೆಯಲ್ಲಿ ತೊಡಗಿದ ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚು ಕಾಲ ಗರ್ಭಿಣಿಯ ನರಳಾಟವನ್ನೂ ಲೆಕ್ಕಿಸದೇ ಅಮಾನವೀಯತೆ ಮೆರೆದಿದ್ದಾರೆ. ಗರ್ಭಿಣಿಯ ನರಳಾಟ ಗಮನಿಸಿ ಬೇರೆ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ ಸ್ಥಳೀಯರು, 108 ಆಂಬುಲೆನ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

108 ambulance ಗರ್ಭಿಣಿ ಅಮಾನವೀಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ