ಭಯ ಮುಕ್ತ ಬಳ್ಳಾರಿ…28-02-2018

ಬಳ್ಳಾರಿ: ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಲಾಡ್, ಬಿಜೆಪಿಯ ರೆಡ್ಡಿಗಳ ಹೆಸರು ಹೇಳದೆಯೇ ಟಾಂಗ್ ನೀಡಿದ್ದಾರೆ. 2008ರಲ್ಲಿ ಬಳ್ಳಾರಿಯಲ್ಲಿ ಭಯದ ವಾತಾವರಣ ಇತ್ತು, ರಾತ್ರಿ ವೇಳೆ ಒಂಟಿಯಾಗಿ ತಿರುಗಾಡಲು ಆಗುತ್ತಿರಲಿಲ್ಲ, ಜನಸಾಮಾನ್ಯರು ರಸ್ತೆ ಬದಿಯಲ್ಲಿ ಪಾನಿಪೂರಿ ತಿನ್ನಲು ಕೂಡ ಹೆದರುತ್ತಿದ್ದರು. ಆದರೆ, ಈಗ ಅ ಭಯ ಇಲ್ಲವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಆತಂಕಗಳು ದೂರವಾಗಿವೆ ಎಂದು ಅನಿಲ್ ಲಾಡ್ ಹೇಳಿದ್ದಾರೆ. ಹಿಂದೆ, ಬಳ್ಳಾರಿಯನ್ನು ಯಾರೋ ಸಿಂಗಾಪುರ ಮಾಡಲಿಕ್ಕೆ ಹೊರಟ್ಟಿದ್ದರು, ಅದರೆ, ಅದು ಸಿಂಗಾಪುರ ಆಗಲೇ ಇಲ್ಲ ಎಂದು ಅನಿಲ್ ಲಾಡ್ ವ್ಯಂಗ್ಯವಾಡಿದರು.


ಸಂಬಂಧಿತ ಟ್ಯಾಗ್ಗಳು

Anil Lad ballery reddy ಜನಸಾಮಾನ್ಯ ಅಧಿಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ