ಸಾರ್ವಜನಿಕ ಸ್ಥಳದಲ್ಲಿ ನೇಣಿಗೆ ಶರಣು…

A man suicide at public place in bengaluru

28-02-2018

ಬೆಂಗಳೂರು: ಕೆಂಗೇರಿ ರೈಲ್ವೆ ಮೇಲುಸೇತುವೆ ಬಳಿ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ಕೆಂಗೇರಿಯ ವಿನಾಯಕನಗರದ ಸರವಣ(25) ಎಂದು ಗುರುತಿಸಲಾಗಿದೆ. ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ರಾಮನಗರ ಮೂಲದ ಸರವಣ, ರೈಲ್ವೆ ಬ್ರಿಡ್ಜ್ ನ ಕಂಬಿಯೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇತುವೆ ಕೆಳಗೆ ಯುವಕನ ದೇಹ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ನಂತರ, ಸ್ಥಳಕ್ಕೆ ಬಂದ ಕೆಂಗೇರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide bridge ನೇಣುಬಿಗಿದು ರೈಲ್ವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ