ಮತಯಂತ್ರ ದುರ್ಬಳಕೆ ಅಸಾಧ್ಯ..

4 thousand new EMV

28-02-2018

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ಈ ಬಾರಿ ಹೊಸದಾಗಿ 4 ಸಾವಿರ ಹೊಸ ಇವಿಎಂಗಳು ಬಳಕೆಯಾಗುತ್ತಿವೆ. ಇಷ್ಟು ಮಾತ್ರವಲ್ಲದೇ 20 ಸಾವಿರ ಇವಿಎಂಗಳನ್ನು ಗುಜರಾತ್ ನಿಂದ ತರಿಸಿಕೊಳ್ಳಲಾಗುತ್ತಿದ್ದು, ಗುಜರಾತ್, ಪಂಜಾಬ್, ಜಾರ್ಖಂಡ್ ಸೇರಿದಂತೆ 5 ರಾಜ್ಯಗಳಿಂದ ಬರುತ್ತಿರುವ ಮತಯಂತ್ರಗಳೂ ಸೇರಿ ಒಟ್ಟಾರೆ 85 ಸಾವಿರ ಮತಯಂತ್ರಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗಲಿವೆ ಎಂದು ತಿಳಿಸಿದ್ದಾರೆ. ಪ್ರತಿ ಮತದಾರ ತಾನು ಮತ ಚಲಾಯಿಸಿದ್ದನ್ನು 7 ಸೆಕೆಂಡ್ ಗಳವರೆಗೂ ಯಂತ್ರದಲ್ಲಿ ನೋಡುವ ಹೊಸ ವಿಧಾನ ಆಳವಡಿಕೆಯಾಗಿದೆ. ಹೊಸದಾಗಲಿ ಹಳೆಯದಾಗಲಿ, ಯಾವುದೇ ಮತಯಂತ್ರವನ್ನು ಟ್ಯಾಂಪರಿಂಗ್ ಮಾಡಲು ಸಾಧ್ಯವೇ ಇಲ್ಲ ಎಂದರು. 2018ರ ಮತದಾರರ ಅಂತಿಮ ಪಟ್ಟಿ ಸಿದ್ಧವಾಗಿದೆ, ಈ ಬಾರಿ ಚುನಾವಣೆಯಲ್ಲಿ ಶೇ.25% ರಷ್ಟು ಹೆಚ್ಚಿನ ಸಿಬ್ಬಂದಿ ಬಳಕೆಯಾಗಲಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Election Commission sanjeev kumar ಆಯುಕ್ತ ಮತಯಂತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ