ಬಿಜೆಪಿ ವಿರುದ್ಧ ಸಿದ್ದು ಕಿಡಿಕಿಡಿ…

karti arrest: siddaramaiah

28-02-2018

ಬಾಗಲಕೋಟೆ: ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪುತ್ರನ ಬಂಧನ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಮೋದಿ ಸರ್ಕಾರ ಐಟಿ ಇಲಾಖೆ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನವರ ಮೇಲೆ ಐಟಿ ದಾಳಿ ಮಾಡಿಸಿ ದ್ವೇಷ ರಾಜಕಾರಣ ಮಾಡುತ್ತಿದೆ ಇದು ಒಳ್ಳೆಯದಲ್ಲ ಎಂದಿದ್ದಾರೆ. ಮೋದಿ ಸರ್ಕಾರ 90 ಪರ್ಸೆಂಟ್ ಕಮಿಷನ್ ಸರ್ಕಾರ, ಯಡಿಯೂರಪ್ಪನವರದ್ದು 100 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿತ್ತು. ಮೋದಿ ಈಸ್ ಫೆಸಿಲಿಟೇಟರ್ ಫಾರ್ ಕರಪ್ಷನ್ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಜೈಲಿಗೆ ಹೋಗಿ ಬಂದ ಭ್ರಷ್ಟ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡೋದಕ್ಕೆ ಹೊರಟಿದ್ದಾರೆ, ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಇವರಿಗೆ ಯಾವ ನೈತಿಕ ಹಕ್ಕಿದೆ, ಲಲಿತ್ ಮೋದಿ, ನೀರವ್ ಮೋದಿ, ವಿಜಯ್ ಮಲ್ಯ ಇವರ ಕುಮ್ಮಕ್ಕಿನಿಂದಲೇ ದೇಶ ಬಿಟ್ಟು ಓಡಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು. ಬಿಜೆಪಿಯಿಂದ ಮುಷ್ಠಿ ಅಕ್ಕಿ ವಿತರಣೆ ಅಭಿಯಾನ ಕುರಿತು ಹೇಳಿದ ಸಿದ್ದರಾಮಯ್ಯ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನಮ್ಮ ಸರ್ಕಾರ ಎಲ್ಲ ಸೌಲಭ್ಯ ಕೊಟ್ಟಿದೆ, ಮುಷ್ಠಿ ಅಕ್ಕಿ ವಿತರಣೆಯಿಂದ ರೈತರಿಗೆ ಏನು ಲಾಭ? ಇದೆಲ್ಲ ಬಿಜೆಪಿಯ ಹೈಡ್ರಾಮ ಎಂದು ಕುಟುಕಿದರು.

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಪ್ರಧಾನಿ ನೋದಿ ಮದ್ಯಸ್ಥಿಕೆ ವಹಿಸಿ ಮೂರೂ ಜನ ಮುಖ್ಯಮಂತ್ರಿಗಳ ಮೀಟಿಂಗ್ ಕರೆದು ಬಗೆಹರಿಸಬೇಕು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು, ಅಂದು ಯಾಕೆ ಮಹದಾಯಿ ಸಮಸ್ಯೆ ಬಗೆ ಹರಿಸಲಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಮಹದಾಯಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ, ಅವರಿಗೆ ಸಮಸ್ಯೆ ಬಗೆ ಹರಿಸುವ ಮನಸ್ಸಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah P. Chidambaram ರಾಜಕೀಯ ಕುಟುಂಬ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ