ಮಾನವಂತರ ನಡುವಿನ ಮಾತುಗಳು…

prakash raj vs Pratap Simha

28-02-2018

ಮೈಸೂರು: ಸಂಸದ ಪ್ರತಾಪ್ ಸಿಂಹ ಹಾಗೂ ನಟ ಪ್ರಕಾಶ್ ರೈ ನಡುವಿನ ವಾಕ್ ಸಮರ ಮುಂದುವರೆದಿದೆ. ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನ ನಷ್ಟ ಮೊಕದ್ದಮೆ ಹೂಡಿದ ಹಿನ್ನೆಲೆ. ತುರ್ತು ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ. ರೀಲ್ ಮತ್ತು ರಿಯಲ್ ಲೈಫ್ ಎರಡರಲ್ಲೂ ಸಮಾಜ ಅವರಿಗೆ ಕೊಡುತ್ತಿರುವ ಬೆಲೆ ಮೂರು ಕಾಸಿನದ್ದಾಗಿದೆ, ಹಾಗಾಗಿ ಪ್ರಕಾಶ್ ರೈ ಒಂದು ರೂ. ಬದಲಿಗೆ ಮೂರು ಕಾಸಿಗೆ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸಲಹೆ ನೀಡಿದ್ದಾರೆ.

ಸಿನಿಮಾದಲ್ಲಿ ಹೆಸರು ಬದಲಿಸುವಂತೆ ನಿಜ ಜೀವನದಲ್ಲೂ ಊರಿಗೊಂದು ಹೆಸರು ಇಟ್ಟುಕೊಂಡಿದ್ದಾರೆ. ನನಗೆ ಬಂದ ಲೀಗಲ್ ನೋಟಿಸ್ ನಲ್ಲಿ ದೆಹಲಿಯ ಜೂಬಿಲಿ ಹಿಲ್ಸ್ ಪ್ರಕಾಶ್ ರಾಜ್ ಹೆಸರಿತ್ತು, ಇದರಿಂದ ಗೊಂದಲವಾಗಿ, ನೀವು ಪ್ರಕಾಶ್ ರೈ ಅಥವ ಪ್ರಕಾಶ್ ರಾಜ್ ಅವರೇ ಎಂದು ಸ್ಪಷ್ಟ ಪಡಿಸಲು ಕೇಳಿದ್ದೇನೆ ಎಂದರು.

ನಾನು ಮಾಜಿ ಸಚಿವ ಮೇಟಿ ವಿಚಾರವೂ ಸೇರಿದಂತೆ ಯಾರದೇ ವೈಯಕ್ತಿಕ ವಿಚಾರಗಳನ್ನು ಎಳೆದುತಂದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ಬಗ್ಗೆ ಬೇರೊಬ್ಬರು ಬರೆದಿದ್ದನ್ನು ಶೇರ್ ಮಾತ್ರ ಮಾಡಿದ್ದೇನೆ. ಅದು ನನ್ನ ಅಭಿಪ್ರಾಯವಲ್ಲ. ಹೀಗಾಗಿ ನನ್ನ ಮೇಲೆ ದಾವೆ ಹಾಕಲು ಬರುವುದಿಲ್ಲ,  ಕೋರ್ಟ್ ವಿವರಣೆ ಕೇಳಿದರೆ ಕೊಡುತ್ತೇನೆ ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Prakash Raj Pratap Simha ಸಾಮಾಜಿಕ ಜಾಲತಾಣ ಗೊಂದಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ