ವಕೀಲೆ v/s ವಕೀಲ

lawyer v/s lady lawyer

28-02-2018

ಬಾಗಲಕೋಟೆ: ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ ವಕೀಲೆಯೊಬ್ಬರು, ಅದೇ ಆರೋಪಿಯ ಮೇಲೆ ಹಲ್ಲೆ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹುನಗುಂದ ತಾಲ್ಲೂಕಿನ ಇಳಕಲ್ ನಗರದ ವಕೀಲ ಮೋಹನ್ ಪಾಟೀಲ್ ಮೇಲೆ ತಡರಾತ್ರಿ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆ, ವಕೀಲೆ ಸೌಂದರ್ಯ ಹಳ್ಳದ ವಕೀಲ ಮೋಹನ್ ಪಾಟೀಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು, ಅವರು ನನ್ನ ಇ-ಮೇಲ್ ಹ್ಯಾಕ್ ಮಾಡಿದ್ದಾರೆ ಎಂದು ದೂರಿದ್ದರು. ಇದೇ ವೇಳೆ, ಇವರಿಬ್ಬರ ಮಧ್ಯೆ ಆಸ್ತಿ ವಿಚಾರದ ಕೇಸ್ ಬಗ್ಗೆ ವೈಮನಸ್ಸಿತ್ತು ಎಂದು ಹೇಳಲಾಗುತ್ತಿದೆ. ಗಾಯಾಳು ಮೋಹನ್ ಪಾಟೀಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Lawyer Lady Lawyer ಇ-ಮೇಲ್ ಖಾಸಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ