ದುಗ್ಗಮ್ಮನ ಜಾತ್ರೆಯಲ್ಲಿ ಕೋಣದ ಬಲಿ

Animal sacrifice in durga devi jatre in davanagere

28-02-2018

ದಾವಣಗೆರೆ: ಈ ಭಾಗದ ಪ್ರಸಿದ್ಧ ದುಗ್ಗಮ್ಮ ದೇವಿ ಜಾತ್ರೆಗೆ ಜನಸಾಗರವೇ ಹರಿದು ಬಂದಿದೆ. ದೇಗುಲದ ಆವರಣದಲ್ಲಿ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮೆರೆದರು. ಆದರೆ, ಬೇವಿನ ಉಡುಗೆ ಪದ್ದತಿ ಅಂದರೆ, ಬೇವಿನ ಸೊಪ್ಪನ್ನೇ ಬಟ್ಟೆಯಂತೆ ಧರಿಸಿದ ಮಹಿಳೆಯರು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಹರಕೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಜಾತ್ರೆಗೂ ಮುನ್ನ ಜಿಲ್ಲಾಡಳಿತ ಬೇವಿನ ಉಡುಗೆ ಹಾಗೂ ಪ್ರಾಣಿಬಲಿ ನಿಷೇಧಿಸಿ ಆದೇಶ ಹೊರಡಿಸಿತ್ತು, ಆದರೆ ಬಟ್ಟೆಯ ಮೇಲೆ ಬೇವಿನುಡುಗೆ ಹಾಕುವುದಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಿದ್ದರೂ ಕೋಣವನ್ನು ಬಲಿ ನೀಡಿ, ಅದರ ತಲೆಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿರುವ ಘಟನೆಯೂ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

durgamma jatre davnagere ಪ್ರಾಣಿಬಲಿ ದೇಗುಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ