ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದ ದುಷ್ಕರ್ಮಿಗಳ ಸೆರೆ

3 bike petrol robbers arrested in tumkur

28-02-2018

ತುಮಕೂರು: ಕಾರುಗಳಿಗೆ ಕಲ್ಲು ಎಸೆದು, ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಶಿರಾ ತಾಲ್ಲೂಕಿನ ಜ್ಯೋತಿ ನಗರ ಮತ್ತು ಕಾಳಿದಾಸ ನಗರದಲ್ಲಿ ದುಷ್ಕರ್ಮಿಗಳು, ಹಲವಾರು ಬೈಕ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಶಿರಾ ಪೊಲೀಸರು ಜ್ಯೋತಿನಗರದ ಚಂದ್ರು, ಧನಂಜಯ, ಚಿರಂಜೀವಿ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಪೆಟ್ರೋಲ್ ಕಳವು ಮಾಡುತಿದ್ದ ಇವರು, ಪೆಟ್ರೋಲ್ ಸೋರಿಕೆಯಾದರೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

petrol vehicles burnt ಕಾರ್ಯಾಚರಣೆ ಆರೋಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ