'ಯಡಿಯೂರಪ್ಪ ಆರೋಪದಲ್ಲಿ ಹುರುಳಿಲ್ಲ'

Ramalinga reddy answer to yeddyurappa allegation

27-02-2018

ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರ ಕೈಗೊಂಬೆಯಾಗಿ ರಾಜ್ಯ ಗೃಹ ಇಲಾಖೆ ಕೆಲಸ ಮಾಡುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಬಳ್ಳಾಪುರದ ಸರ್‍ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗೃಹ ಇಲಾಖೆ ಬಗ್ಗೆ ಸಲಹೆ ಬೇಕೆಂದರೆ ಕೆಂಪಯ್ಯ ಮಾತ್ರವಲ್ಲ, ಬಿ.ಎಸ್.ಯಡಿಯೂರಪ್ಪ ಅವರ ಬಳಿಯೂ ಕೇಳುತ್ತೇವೆ. ಯಡಿಯೂರಪ್ಪ ಅವರು ಸದಾ ಗೃಹ ಇಲಾಖೆ ಮತ್ತು ಕೆಂಪಯ್ಯ ಅವರ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದರು. ಗೃಹ ಇಲಾಖೆಯ ಯಾವುದೇ ಕಡತಕ್ಕೂ ಗೃಹ ಸಚಿವರಾಗಿ ನಾನೇ ಸಹಿ ಹಾಕಬೇಕಾಗುತ್ತದೆ. ಗೃಹ ಇಲಾಖೆ ಕೆಂಪಯ್ಯ ಅವರ ಕೈಗೊಂಬೆಯಾಗಿದೆ ಎಂಬ ಆರೋಪಗಳು ನಿರಾಧಾರವಾಗಿವೆ ಎಂದರು.


ಸಂಬಂಧಿತ ಟ್ಯಾಗ್ಗಳು

Ramalinga reddy home minister ಗೃಹ ಇಲಾಖೆ ಸಲಹೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ