ಬೆಂಗಳೂರಲ್ಲಿ ಬಿಜೆಪಿ ಪಾದಯಾತ್ರೆ

from march 2 BJP padayatra in bengaluru

27-02-2018

ಬೆಂಗಳೂರು: ಮಾರ್ಚ್ 2ರಿಂದ 28ರವರೆಗೂ ಬಿಜೆಪಿಯಿಂದ 'ಬೆಂಗಳೂರು ರಕ್ಷಿಸಿ ಯಾತ್ರೆ' ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ.

ನಗರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹೆಚ್ಚುತ್ತಿರುವ ಭ್ರಷ್ಟಾಚಾರ, ಕಳಪೆ ಮೂಲಸೌಕರ್ಯ, ಟ್ರಾಫಿಕ್ ಸಮಸ್ಯೆ, ಕೆರೆ ಮತ್ತು ಕಸದ ಸಮಸ್ಯೆಗಳ ಬಗ್ಗೆ ರಕ್ಷಾ ಯಾತ್ರೆಯ ಉದ್ದೇಶವಾಗಿದ್ದು, 15 ದಿನಗಳ ಕಾಲ ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಪಾದ ಯಾತ್ರೆ ನಡೆಸಲಿದ್ದೇವೆ ಎಂದರು. ಪಾದಯಾತ್ರೆ ವೇಳೆ ಸ್ಥಳೀಯ ವಿಧಾನಸಭಾ ಕ್ಷೇತ್ರದ ಸಮಸ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುವುದು, ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ನಾಯಕರ ಭಾಗಿಯಾಗೋ ಬಗ್ಗೆ ಮುಂದೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರ್.ಅಶೋಕ್ ತಿಳಿಸಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೈಯಲ್ಲೇ ಭ್ರಷ್ಟಾಚಾರವಿದೆ, ಕೈಯಲ್ಲಿ 70 ಲಕ್ಷ ಮೌಲ್ಯದ ವಾಚ್ ಕಟ್ಟಿಕೊಂಡಿದ್ದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ಅವರ ಎಡಬಲದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವರನ್ನು ಇಟ್ಟುಕೊಂಡು ಸಿಎಂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ದೂರಿದ ಅವರು, ಚುನಾವಣೆಗೆ ಹಣ ಸಂಗ್ರಹಿಸಲು ತರಾತುರಿಯಲ್ಲಿ ಬೆಂಗಳೂರು ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ, ಇದು ಸಾವಿರಾರು ಕೋಟಿ ಹಗರಣ ಎಂದು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

R Ashok bengaluru raksha ಭ್ರಷ್ಟಾಚಾರ ತರಾತುರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ