ಜೈಲಲ್ಲೇ ಸೈಕೊ ಶಂಕರ ಆತ್ಮಹತ್ಯೆ

psycho shankar suicide in jail

27-02-2018

ಬೆಂಗಳೂರು: ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಸೇರಿರುವ ಸೈಕೋ ಶಂಕರ ಅಲಿಯಾಸ್ ಜೈಶಂಕರ್ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಕಂರನಿಗೆ ಪ್ರತ್ಯೇಕ ಸೆಲ್ ನೀಡಲಾಗಿತ್ತು. ಆದರೆ ತಡರಾತ್ರಿ ಬ್ಲೆಡ್ ನಿಂದ ಕತ್ತು ಕೊಯ್ದುಕೊಂಡು ಒದ್ದಾಡುತ್ತಿದ್ದನು. ಇದನ್ನು ಕಂಡ ಜೈಲು ಸಿಬ್ಬಂದಿ ವಿಕ್ಟೋರಿಯಾ ಅಸ್ಪತ್ರಗೆ ಸಾಗಿಸಲು ಯತ್ನಿಸಿದ್ದು, ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡು ವರ್ಷಗಳ ಹಿಂದ ಜೈಲಿನಿಂದ ಎಸ್ಕೇಪ್ ಅಗಲು ಪ್ರಯತ್ನಿಸಿ, ಜೈಲಿನ ರಕ್ಷಣಾ ಗೋಡೆ ಹಾರಿ ಸೊಂಟ ಮುರಿದುಕೊಂಡಿದ್ದ. ಜೈ ಶಂಕರ್ ವಿರುದ್ಧ 20ಕ್ಕೂ ಹೆಚ್ಚು ಕೊಲೆ ಪ್ರಕರಣಗಳಿವೆ. ತಮಿಳುನಾಡಿನಲ್ಲಿ 19 ಕೊಲೆ ಮಾಡಿ ಬಂಧನಕ್ಕೊಳಗಾಗಿದ್ದ ಈತ ತಮಿಳುನಾಡಿನ ಸೆಂಟ್ರಲ್ ಜೈಲಿನಿಂದಲೂ ತಪ್ಪಿಸಿಕೊಂಡಿದ್ದ. ಚಿತ್ರದುರ್ಗ, ತುಮಕೂರಲ್ಲಿ 8ಮಂದಿ ಮಹಿಳೆಯರನ್ನು ಬರ್ಬರವಾಗಿ ಹತ್ಯೆಮಾಡಿದ್ದಾನೆ. 20ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. 2013ರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಗೋಡೆ ಹಾರಿ ಎಸ್ಕೇಪ್ ಆಗಿದ್ದ.

 


ಸಂಬಂಧಿತ ಟ್ಯಾಗ್ಗಳು

psycho Rapist ತಡರಾತ್ರಿ ಅಗ್ರಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ