‘ಭ್ರಷ್ಟರನ್ನು ಬಹಿಷ್ಕರಿಸಿ’

change the society: bring honour to constitution

27-02-2018

ಗದಗ: ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಿಸಿ ಎಂದು ನಿವೃತ್ತ ಲೋಕಾಯುಕ್ತ ನಾಯಮೂರ್ತಿ ಸಂತೋಷ ಹೆಗಡೆ ಕರೆ ನೀಡಿದ್ದಾರೆ. ಇಂದು ಜೈಲಿಗೆ ಹೋಗಿ ಹೊರ ಬಂದವರಿಗೆ ನಾವು ಮಾಲೆ ಹಾಕಿ ಗೌರವಿಸುತ್ತಿದ್ದೇವೆ, ನಮ್ಮಿಂದ ಆಯ್ಕೆಯಾದವರು ನಮ್ಮನ್ನೇ ನೀವು ಯಾರು ಅಂತ ಕೇಳುವಂತಾಗಿದೆ. ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ್ ಅನ್ನುವಂತಾಗಿದೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗದಗನಲ್ಲಿ ನಡೆದ ಜನಾಂದೋಲನಗಳ ಮಹಾಮೈತ್ರಿ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಿದೆ ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗದಲ್ಲಿ ನ್ಯಾಯ? ನಮ್ಮಲ್ಲಿರುವ ಮೌಲ್ಯ ಕುಸಿತವೇ ಇದಕ್ಕೆ ಕಾರಣ. ಸಮಾಜ ಬದಲಾಯಿಸಿ ಸಂವಿಧಾನಕ್ಕೆ ಗೌರವ ತರಬೇಕಿದೆ ಎಂದರು. ನಾನು ನೀಡಿದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳ ಹೆಸರಿದೆ. 7ಜನ ಮಂತ್ರಿಗಳು, ಐಎಎಸ್, ಐಪಿಎಸ್ ಸೇರಿ 87 ಜನ ಅಧಿಕಾರಿಗಳಿದ್ದಾರೆ. ಅಕ್ರಮ ಗಣಿಗಾರಿಕೆ ಬಗ್ಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಬಗ್ಗೆ ವರದಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ವಿಷಾದಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Santosh Hegde Lokayuktha ವರದಿ ಅಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ