ಕುಮಾರ್ ಬಂಗಾರಪ್ಪ ವಿರುದ್ಧ ಕಿಡಿ..!

Madhu bangarappa v/s kumar bangarappa

26-02-2018

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಹಗರಣದ ಕುರಿತು ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಶಾಸಕ ಕಿಮ್ಮನೆ ರತ್ನಾಕರ್ ಪ್ರಶ್ನೆ ಕೇಳಿದ್ದು ಸರಿಯಲ್ಲ ಎಂದು, ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ. ಈಗಾಗಲೇ ಪ್ರಕರಣದ ಕುರಿತು ಚಾರ್ಜ್ ಶೀಟ್ನಲ್ಲಿ ಕೆಲವರ ಹೆಸರನ್ನು ಕೈ ಬಿಡಲಾಗಿದೆ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.

ಕಿಮ್ಮನೆ ರತ್ನಾಕರ್ ಮರಳು ದಂಧೆಯನ್ನು ತಮ್ಮೊಂದಿಗೆ ಇದ್ದವರೂಂದಿಗೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಜೆಡಿಎಸ್ ಪರ ಅಲೆ ಕಂಡು ಕಿಮ್ಮನೆ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದಾರೆ ಎಂದು ಕುಟಿಕಿದರು. ರೈತರ ಮೇಲೆ ಗೋಲಿಬಾರ್ ನಡೆಸಿದ ಬಿಎಸ್ ವೈ ನವರ ಹುಟ್ಟುಹಬ್ಬವನ್ನು ರೈತರ ಸಮಾವೇಶ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಕುಮಾರ್ ಬಂಗಾರಪ್ಪ ರವರು ತಂದೆ ಬಂಗಾರಪ್ಪ ನವರ ಹುಟ್ಟುಹಬ್ಬ ಆಚರಣೆ ಮಾಡದೇ ಈಗ ಯಡಿಯೂರಪ್ಪ ನವರ ಹುಟ್ಟು ಹಬ್ಬ ಮಾಡಲು ಹೋಗುತ್ತಿದ‌್ದಾರೆ ಎಂದು ಸಹೋದರನ ವಿರುದ್ಧ ಕಿಡಿಕಾರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ