ಮತ್ತೆ ಎರಡು ಕಡೆ ಸರಗಳ್ಳತನ

Again 2 chain snatch cases in bangalore

26-02-2018

ಬೆಂಗಳೂರು: ಪತಿಯ ಜೊತೆ ನಡೆದು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಯೊಬ್ಬ ಕಸಿದು ಪರಾರಿಯಾಗಿದ್ದಾನೆ. ಬಗಲಗುಂಟೆಯ ಎಂಎಸ್‍ಆರ್ ಲೇಔಟ್‍ನ ಮೋಹನ್ ಕುಮಾರಿ ಅವರು ಸಂಬಂಧಿಕರ ಮನೆಗೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿ ಅವರ ಕತ್ತಿನಲ್ಲಿದ್ದ 65 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ಮೋಹನ್ ಕುಮಾರಿ ಅವರ ಪತಿ ದುಷ್ಕರ್ಮಿಯನ್ನು ಬೆನ್ನಟ್ಟಿದ್ದರಾದರೂ ಕತ್ತಲಲ್ಲಿ ಪರಾರಿಯಾಗಿದ್ದಾನೆ. ಇದಾದ ಕೆಲವೇ ನಿಮಿಷಗಳ ಮುನ್ನ ಮಲ್ಲಸಂದ್ರದ ಬಿಎಚ್‍ಎಲ್ ಮಿನಿಕಾಲೋನಿಯ ಕೊಡವ ಸಮಾಜದ ಬಳಿ ಸುಂದರಮ್ಮ ಎನ್ನುವ ಮಹಿಳೆಯ ಮಾಂಗಲ್ಯ ಸರವನ್ನು ಕಸಿಯಲು ವಿಫಲ ಯತ್ನ ನಡೆಸಲಾಗಿದೆ. ದುಷ್ಕರ್ಮಿಯೊಬ್ಬ ಸರ ಕಸಿಯಲು ಬಂದಾಗ ಸುಂದರಮ್ಮ ಸರಗಟ್ಟಿಯಾಗಿ ಹಿಡಿದುಕೊಂಡು ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದರಿಂದ ಭಯಗೊಂಡ ದುಷ್ಕರ್ಮಿ ಪರಾರಿಯಾಗಿದ್ದಾನೆ. ಈ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬಗಲಗುಂಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snatch Pulsar ಮಾಂಗಲ್ಯ ದುಷ್ಕರ್ಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ