ಕ್ಷಮೆಯಾಚಿಸಿದ ಪ್ರಕಾಶ್ ರೈ..!

Prakash Rai apologise with fans..!

26-02-2018

ಮೈಸೂರು: ನಾನೂ ಸಿನಿಮಾದಲ್ಲಿ ಮಾತ್ರ ವಿಲನ್ ಮತ್ತೆ ಕೆಲ ಪತ್ರಕರ್ತರಿಗೂ ವಿಲನ್ ಎಂದು ನಟ ಪ್ರಕಾಶ್ ರೈ ಮಾರ್ಮಿಕವಾಗಿ ನುಡಿದಿದ್ದಾರೆ. ಮೈಸೂರಿನ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನನ್ನನ್ನು ಓರ್ವ ನಟನಾಗಿ ಮಾತ್ರವದಲ್ಲ, ಓರ್ವ ವ್ಯಕ್ತಿಯಾಗಿ ಗುರ್ತಿಸಬೇಕಿದೆ ಎಂದಿದ್ದಾರೆ.

ಗೌರಿ ಲಂಕೇಶ್ ಹತ್ಯೆ ನನ್ನನ್ನು ತೀವ್ರ ಚಿಂತೆಗೀಡುಮಾಡಿತ್ತು, ಆದ್ದರಿಂದ ಐಷಾರಾಮಿ ಜೀವನ ಬಿಟ್ಟು ಹೋರಾಟದ ಹಾದಿ ಹಿಡಿದಿದ್ದೇನೆ. ನೀನು ಕ್ರಿಶ್ಚಿಯನ್.? ನೀನು ಜಾತ್ಯತೀತ.? ನೀನು ಕಾಂಗ್ರೆಸ್ ಏಜೆಂಟ್.? ಹೀಗೆಲ್ಲ ಕೋಮು ದಳ್ಳುರಿ ವ್ಯಕ್ತಪಡಿಸುತ್ತಿದ್ದಾರೆ. ನಾವು ಯಾವ ಸಮಾಜದಲ್ಲಿದ್ದೇವೆ ಎಂಬ ಪ್ರಶ್ನೆಯಾಗಿದೆ. ನಾನೂ ಭಾರತೀಯ ಪ್ರಜೆ, ನೀವೂ ನನ್ನ ಪ್ರಶ್ನೆ ಮಾಡೋ ಅಧಿಕಾರವಿದೆ. ಆದರೆ ಈ ಎಲ್ಲಾ ಘಟನೆಗಳನ್ನೂ ರಾಜಕೀಯವಾಗಿ  ಬಿಂಬಿಸಲಾಗಿದೆ ಎಂದು ಮೈಸೂರಿನಲ್ಲಿ ಇತ್ತೀಚೆಗೆ ಘಟನೆಗಳ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದರು.

ನಲಪಾಡ್ ಹ್ಯಾರೀಸ್ ಪ್ರಕರಣದಲ್ಲಿ ನಿಜವಾಗಿಯೂ ಮುಜುಗರವಾಗಿದೆ. ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಸಂದರ್ಭ ಯುವಕರು ಈ ರೀತಿ ಇರಬೇಕು, ಈ ರೀತಿಯ ಗುಣ ಬೆಳೆಸಿಕೊಳ್ಳಬೇಕು ಎಂದಿದ್ದೆ. ಆದರೆ ಆತನ ಮನದಲ್ಲಿ ರಾಕ್ಷಸ ಇದ್ದಾನೆಂದು ಗೊತ್ತಿರಲಿಲ್ಲ. ಇನ್ನು ಮುಂದೆ ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವಾಪರ ತಿಳಿದು ಮಾತನಾಡುತ್ತೇನೆ. ಈ ಕುರಿತು ನನ್ನನ್ನ ಪ್ರೀತಿಸುತ್ತಿರುವ ಜನರಿಗೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gauri Lankesh Prakash Raj ರಾಕ್ಷಸ ಪೂರ್ವಾಪರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ