ಕ್ಯಾಬ್ ಚಾಲಕನ ಭೀಕರ ಕೊಲೆ

Horrific murder in bengaluru

26-02-2018

ಬೆಂಗಳೂರು: ತಿಪ್ಪೇನಹಳ್ಳಿಯಲ್ಲಿ ನಿನ್ನೆ ಮಧ್ಯರಾತ್ರಿ ಕ್ಯಾಬ್ ಚಾಲಕನೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಪೀಣ್ಯದ ನಡೆದಿದೆ. ಕೊಲೆಯಾದವರನ್ನು ದೊಡ್ಡಬಿದರಕಲ್ಲುವಿನ ಸಂತೋಷ್ (24)ಎಂದು ಗುರುತಿಸಲಾಗಿದೆ. ತುಮಕೂರು ಮೂಲದ ಸಂತೋಷ್, ಕ್ಯಾಬ್ ಚಾಲಕನಾಗಿದ್ದು, ರಾತ್ರಿ 1ರ ವೇಳೆ ತಿಪ್ಪೇನಹಳ್ಳಿಯ ಅನ್ನಪೂರ್ಣೇಶ್ವರಿ ಲೇಔಟ್ ಬಳಿ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಸಂತೋಷ್ ರಂಗನಾಥ ಎಂಬುವನ ಜೊತೆ ರಾತ್ರಿ ಮದ್ಯಪಾನ ಮಾಡಿ ಓಡಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ಆತನ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಸಂತೋಷ್ ಕುಟುಂಬದವರು ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೀಣ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder horrific ಸ್ಥಳೀಯ ಮದ್ಯಪಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ