ನಾಡ ಬಾಂಬ್ ಎಸೆದು ಶಾಸಕನ ಹತ್ಯೆಗೆ ಯತ್ನ..!

A man Attempted to murder Congress MLA

26-02-2018

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಅವರ ಮೇಲೆ ನಾಡ ಬಾಂಬ್ ಎಸೆದು ಕೊಲೆಯತ್ನ ನಡೆದಿದ್ದು ಅದೃಷ್ಟವಶಾತ್ ಶಾಸಕರು ಆಪಾಯದಿಂದ ಪಾರಾಗಿದ್ದಾರೆ. ಶಾಸಕ ಮಂಕಾಳು ವೈದ್ಯ ಅವರು ಹೊನ್ನಾವರದ ಹೊಸಾಡ್ ಗ್ರಾಮದಲ್ಲಿ ವಾಲಿಬಾಲ್ ಕಾರ್ಯಕ್ರಮದ ಉದ್ಘಾಟನೆ ಮಾಡಲು ಆಗಮಿಸಿದ ವೇಳೆ ಹತ್ಯೆಗೆ ನಾಡಬಾಂಬ್ ಎಸೆಯಲು ಮುಂದಾದ ರೈಮಂಡ್ ಮಿರಂಡ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಸಕ ಮಂಕಾಳು ವೈದ್ಯ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದ್ದು, ಕಾರ್ಯಕ್ರಮ ನಡೆಯುತ್ತಿರುವ ವೇಳೆ ರೈಮಂಡ್ ಮಿರಂಡ್ ತನ್ನ ಕೈಯಲ್ಲಿ ನೆಲ ಬಾಂಬ್ ಹಿಡಿದುಕೊಂಡಿದ್ದನು. ಕೆಲ ಸಮಯದ ಬಳಿಕ ಅದನ್ನು ಶಾಸಕರ ಕಡೆ ಎಸೆಯಲು ಮುಂದಾದಾಗ ಬಾಂಬ್ ಆತನ ಕೈಯಲ್ಲೇ ಸ್ಫೋಟಗೊಂಡಿದೆ. ಬಳಿಕ ಆರೋಪಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ. ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಬಾಂಬ್ ಸ್ಫೋಟದಿಂದ ಆರೋಪಿಯ ಕೈ ಸಂಪೂರ್ಣ ಸುಟ್ಟು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಕೃತ್ಯ ನೆಡೆಸಲು ಪ್ರಯತ್ನಿಸಿದ ವ್ಯಕ್ತಿಯ ಕೈಯಲ್ಲೇ ನೆಲಬಾಂಬ್ ಸ್ಫೋಟವಾದ್ದರಿಂದ ಶಾಸಕ ಮಂಕಾಳು ವೈದ್ಯ ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಶಾಸಕ ಮಂಕಾಳು ವೈದ್ಯ ಸ್ಫೋಟ volley ball Bomb


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ