ದತ್ತು ಸ್ವೀಕಾರ ಪದ್ಧತಿಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಬದಲಾವಣೆ

Kannada News

02-05-2017

ನವದೆಹಲಿ : ದತ್ತು ಸ್ವೀಕಾರ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಆರಿಸಿ ಮತ್ತು ಆಯ್ಕೆ (ಪಿಕ್ ಅಂಡ್ ಚ್ಯೂಸ್) ಪದ್ಧತಿಗೆ ಇಂದಿನಿಂದ ಕೊನೆ ಹಾಡಲಿದೆ. ಈಗಿರುವ ಪದ್ಧತಿಯಲ್ಲಿ ದತ್ತು ಪಡೆಯಲಿಚ್ಛಿಸುವ ಪೋಷಕರಿಗೆ ಮೂರು ಮಕ್ಕಳನ್ನು ತೋರಿಸಲಾಗುತ್ತಿತ್ತು. ಅದರಲ್ಲಿ ಒಂದು ಮಗುವನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರಿಗೆ ಅವಕಾಶವಿತ್ತು.  ಮಕ್ಕಳ ಪಟ್ಟಿ ಪರಿಶೀಲನೆಯ ಮೂರು ಸುತ್ತುಗಳಲ್ಲಿ ಪಾಲಕರು ಪಾಲ್ಗೊಳ್ಳಬಹುದು. ಪ್ರತಿ ಮಗುವಿನ ವಿವರಗಳನ್ನು ಅವರಿಗೆ ಕಳುಹಿಸಲಾಗುವುದು. ಆದರೆ ಈ ಸುತ್ತುಗಳಲ್ಲಿ ಮೂರು ಮಕ್ಕಳನ್ನು ಆಯ್ದುಕೊಂಡು ಅವರಲ್ಲಿ ಒಂದು ಮಗುವನ್ನು ಪಾಲಕರು ಆಯ್ಕೆ ಮಾಡುವಂತಿಲ್ಲ. ಅವರಿಗೆ ಸೂಚಿಸಲಾಗುವ ಒಂದು ಮಗುವನ್ನಷ್ಟೇ ಅವರು ಆಯ್ಕೆ ಮಾಡಬಹುದು ಅಥವಾ ತಿರಸ್ಕರಿಸಬಹುದು.

ಈ ಹಿನ್ನೆಲೆಯಲ್ಲಿ ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ ಹೊಸ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಬಾಲಕೇಂದ್ರದಲ್ಲಿರುವ ಎಲ್ಲಾ ಮಕ್ಕಳನ್ನು ಆಸಕ್ತ ಪೋಷಕರಿಗೆ ತೋರಿಸಲಾಗುತ್ತದೆ. ಅದರಲ್ಲಿ ಇಚ್ಛೆ ಪಟ್ಟ ಒಂದು ಮಗುವನ್ನು ಪೋಷಕರು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆ 48 ಗಂಟೆಗಳಲ್ಲಿ ಮುಗಿಯಲಿದೆ. ನಂತರ ಆ ಮಗುವನ್ನು ಹೊಂದಾಣಿಕೆ ಮಾಡಿಕೊಳ್ಳಲು ಮತ್ತು ದತ್ತು ಪಡೆದುಕೊಳ್ಳಲು ಸುಮಾರು 20 ದಿನಗಳ ಕಾಲಾವಕಾಶವಿರಲಿದೆ. ಮೂರು ಸುತ್ತು ಕೌನ್ಸಿಲಿಂಗ್‍ಗೆ ಪೋಷಕರು ಹಾಜರಾಗಬೇಕಾಗುತ್ತದೆ.

ಈ 20 ದಿನಗಳಲ್ಲಿ ಆಯ್ಕೆ ಮಾಡಿಕೊಂಡ ಮಗು ದತ್ತು ಪಡೆಯಲಿಚ್ಛಿಸುವ ಪೋಷಕರಿಗೆ ಹೊಂದಿಕೊಂಡರೆ ಪ್ರಕ್ರಿಯೆಯನ್ನು ಮುಂದುವರೆಸಲಾಗುತ್ತದೆ.

ಇಲ್ಲವಾದರೆ 90 ದಿನಗಳ ಅಂತರ ನೀಡಿ ಮತ್ತೊಂದು ಸುತ್ತಿನ ಮನವೊಲಿಕೆ ಪ್ರಯತ್ನವನ್ನು ನಡೆಸುವ ಅವಕಾಶ ನೀಡಲಾಗುವುದು ಎಂದು ದತ್ತು ಸ್ವೀಕಾರ ಸಂಪನ್ಮೂಲ ಪ್ರಾಧಿಕಾರದ ಸಿಇಒ ಲೆಫ್ಟಿನೆಂಟ್ ಕರ್ನಲ್ ದೀಪಕ್‍ಕುಮಾರ್ ತಿಳಿಸಿದ್ದಾರೆ.  

Links :ಟಾಪ್ ಪ್ರತಿಕ್ರಿಯೆಗಳು


ನಮಗೆ ದತು ಮಕ್ಕಳ ತೆಗೆದುಕೊಳ್ಳುವುದು ಇದೆ
  • ಶೀ ಬಸವೇಶ್ವರ ಇಟಗಿ
  • ಉಪನ್ಯಾಸಕರ