ಕೊಲೆ-ಮದುವೆ ಮತ್ತು ಜೈಲು...

Murder-marriage and jail..

26-02-2018

ರಾಮನಗರ: ಇದೇ ತಿಂಗಳ ಫೆಬ್ರವರಿ 14ರಂದು ಚೆನ್ನಪಟ್ಟಣದಲ್ಲಿ ನಡೆದ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಾಗೇಶ್ (25) ಬಂಧಿತ ಆರೋಪಿ. ಚನ್ನಪಟ್ಟಣ ತಾಲ್ಲೂಕಿನ ಬೇವೂರು ಮಂಡ್ಯ ಗ್ರಾಮದಲ್ಲಿ, ಸರೋಜಮ್ಮ(60) ಎಂಬಾಕೆಯ ಕೊಲೆ ನಡೆದಿತ್ತು. ಆರೋಪಿ ನಾಗೇಶ್ನನ್ನು ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಕೃತ್ಯದ ಬಗ್ಗೆ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾನೆ. 

ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಗ್ಯಾಸ್ ಅಂಗಡಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ನಾಗೇಶ್, ತನ್ನ ಮದುವೆಗೆ ಹಣದ ಅವಶ್ಯಕ ಇದ್ದು, ಈ ಹಿನ್ನೆಲೆಯಲ್ಲಿ ಸರೋಜಮ್ಮ ಅವರನ್ನು ಹತ್ಯೆ ಮಾಡಿದ್ದಾನೆ. ಬಳಿಕ ಚಿನ್ನಾಭರಣರಗಳನ್ನು ದೋಚಿ ಮೂರು ಲಕ್ಷಕ್ಕೆ ಬೆಂಗಳೂರಿನಲ್ಲಿ ಅಡವಿಟ್ಟು, ತಲಕಾಡಿನಲ್ಲಿ ಫೆಬ್ರವರಿ 18 ರಂದು ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಾನೆ. ಪ್ರಕರಣದ ಕುರಿತು ರಾಮನಗರ ಎಸ್ಪಿ ಬಿ.ರಮೇಶ್ ಅವರು, ಆರೋಪಿಯನ್ನು ಹಾಜರುಪಡಿಸಿ ಮಾಹಿತಿ ನೀಡಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

Murder gold ವಿಚಾರಣೆ ಅಂಗಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ