ಸೇಡಂನಲ್ಲಿ ಬಿಜೆಪಿ ನವಶಕ್ತಿ ಸಮಾವೇಶ

Nava Shakthi samavesha in kalaburgi

26-02-2018

ಕಲಬುರಗಿ: ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರವಾಸ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕಲಬುರಗಿಯ ಪಿ.ಡಿ.ಎ.ಕಾಲೇಜಿನ ಆಡಿಟೋರಿಯಂ ಹಾಲ್ನಲ್ಲಿ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಿಂದುಳಿದ ವರ್ಗಗಳ ಮುಖಂಡರ ಜೊತೆ ಅಮಿತ್ ಷಾ ಸಂವಾದ ನಡೆಸಲಿದ್ದು, ನಂತರದಲ್ಲಿ ಬಿಜೆಪಿ ವಿಭಾಗಿಯ ಮಟ್ಟದ ಶಕ್ತಿ ಕೇಂದ್ರ ಪ್ರಮುಖರೊಂದಿಗೆ ಮಾತುಕತೆ ಮತ್ತು ಜಿಲ್ಲೆಯ ಸೇಡಂನ ಮಾತೃಛಾಯಾ ಕಾಲೇಜು ಆವರಣದಲ್ಲಿ ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Amit shah Nava Shakthi ಕಾರ್ಯಕರ್ತ ರಾಷ್ಟ್ರೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ