'ಗೂಂಡಾಗಿರಿ ಮಿತಿಮೀರಿದೆ’

jagadish shettar reaction on rahul gandhi yatra

24-02-2018

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂಬಯಿ ಕರ್ನಾಟಕ ಪ್ರವಾಸ ಹಿನ್ನೆಲೆ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಹುಲ್ ಗಾಂಧಿ ರಾಜ್ಯಕ್ಕೆ ಎಷ್ಟು ಬಾರಿ ಬಂದರೂ ಪ್ರಯೋಜನ ಆಗಲ್ಲ. ಅವರು ಪ್ರಚಾರ ಮಾಡಿದಲ್ಲೆಲ್ಲಾ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಐಸಿಸಿ ಅಧ್ಯಕ್ಷರಾದ ಕಾರಣ ಅನಿವಾರ್ಯವಾಗಿ ಪ್ರಚಾರ ಮಾಡಲೇಬೇಕು, ಕಾಂಗ್ರೆಸ್‌ ನವರು ರಾಹುಲ್ ಗಾಂಧಿಯವರನ್ನು ಹೊತ್ತುಕೊಂಡು ಸುಮ್ಮನೆ ಓಡಾಡುತ್ತಾರೆ ಇದರಿಂದ ಉಪಯೋಗವಿಲ್ಲ ಎಂದಿದ್ದಾರೆ.

ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿ ವಿಚಾರವಾಗಿ, ಕರ್ನಾಟಕಕ್ಕೆ ಹನಿ ನೀರು ಬಿಡಲ್ಲ ಎಂದು ಗೋವಾ ಚುನಾವಣೆ ವೇಳೆ ಸೋನಿಯಾ ಗಾಂಧಿ ಹೇಳಿದ್ದರು. ಮಹದಾಯಿ ವಿಚಾರದಲ್ಲಿ ತಮ್ಮ ನಿಲುವನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಮತ್ತು ಮಹದಾಯಿ ವಿಷಯದಲ್ಲಿ ಅಡ್ಡಗಾಲು ಹಾಕದಂತೆ ಗೋವಾ ಕಾಂಗ್ರೆಸ್‌ಗೆ ಸೂಚಿಸಬೇಕು, ಇಲ್ಲದಿದ್ದರೆ ಕಾಂಗ್ರೆಸ್ ನಾಟಕ ಮಾಡುತ್ತಿರುವುದು ಸ್ಪಷ್ಟವಾಗುತ್ತೆ ಎಂದರು. ಕಾಂಗ್ರೆಸ್ ಸರ್ಕಾರದ್ದು ಗೂಂಡಾ ಸಂಸ್ಕೃತಿ, ಸದನದ ಒಳಗೂ ಹೊರಗೂ ಕಾಂಗ್ರೆಸ್‌ನವರ ಗೂಂಡಾಗಿರಿ ಮಿತಿಮೀರಿದೆ ಎಂದು ಕಿಡಿಕಾರಿದರು.


ಸಂಬಂಧಿತ ಟ್ಯಾಗ್ಗಳು

jagadish shettar Rahul gandhi ಉಪಯೋಗ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ