ವಿದ್ಯಾರ್ಥಿಗೆ ಇದೆಂಥಾ ಶಿಕ್ಷೆ..!

instagram post on amit shah: A student suspended..!

24-02-2018

ದಕ್ಷಿಣ ಕನ್ನಡ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಗ್ಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ ವಿದ್ಯಾರ್ಥಿಯೊಬ್ಬರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ‌ವಿದ್ಯಾರ್ಥಿ ಜೆಸ್ಟೀನ್ ಎಂಬವರನ್ನು ಮೌಖಿಕವಾಗಿ ಒಂದು ವಾರ ತರಗತಿಗೆ ಬಾರದಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ.

ಕಳೆದ ಸೋಮವಾರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅಮಿತ್ ಷಾ ಭಾಗಿಯಾಗಿದ್ದರು. ಸಂವಾದದ ಪೋಟೋವನ್ನು ಬಳಸಿ ಬಂಡಲ್ ರಾಜ ‌ಅಮಿತ್ ಷಾ ಎಂದು ಉಲ್ಲೇಖಿಸಿ, ಜೆಸ್ಟೀನ್ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದಾರೆ. ಆದರೆ ಕಾಲೇಜು ಆಡಳಿತ ಮಂಡಳಿಯ ಈ ರೀತಿಯ ವರ್ತನೆ ಎಷ್ಟ ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.


ಸಂಬಂಧಿತ ಟ್ಯಾಗ್ಗಳು

instagram Amit Shah ವಿದ್ಯಾರ್ಥಿ ಅಮಾನತು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ