ಲಾಡ್ಜ್ ಮಾಲೀಕನಿಗೆ ಬ್ಲ್ಯಾಕ್ ಮೇಲ್ ಹಿನ್ನೆಲೆ ನಕಲಿ ಪತ್ರಕರ್ತ ಪೊಲೀಸರ ವಶಕ್ಕೆ

Kannada News

02-05-2017

ಮಂಡ್ಯ:- ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಜಗದೀಶ್ ಎಂಬಾತ ಮಂಡ್ಯದ ಮದ್ದೂರಿನ ನೈದಿಲೆ ಲಾಡ್ಜ್ ಮಾಲೀಕನ ಮೇಲೆ ವೇಶ್ಯಾವಾಟಿಕೆ ಆರೋಪ ಹಿನ್ನೆಲೆ ಲಾಡ್ಜ್ ಮಾಲೀಕನಿಗೆ ಬ್ಲ್ಯಾಕ್ ಮೇಲ್  ಮಾಡುತ್ತಿದ್ದ. ಈ ಕುರಿತು  ಜಗದೀಶ್ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಜಗದೀಶ್. ಹಣ ಕೊಡಲು ನಿರಾಕರಿಸಿದಾಗ ಸುದ್ದಿ ಮಾಡುವ ಬೆದರಿಕೆ ಒಡ್ಡಿರುವುದಾಗಿ ವಿಚಾರಣೆ ವೇಳೆ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದ. ಕರವೇ ಅಧ್ಯಕ್ಷ, ಕರವೇ ವಾಹಿನಿ ಎಂಡಿ, ವರದಿಗಾರ ಎಂದೆಲ್ಲಾ ಸುಳ್ಳು ಹೇಳುತ್ತಿದ್ದ . ಅಷ್ಟೇ ಅಲ್ಲದೇ ಇಬ್ಬರು ಹುಡುಗಿಯರನ್ನ ಕರೆ ತಂದು ಅಸಭ್ಯವಾಗಿ ನಡೆದುಕೊಂಡಿದ್ದ ಆರೋಪಿ ಜಗದೀಶ್ ನನ್ನು ಮದ್ದೂರು ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ