ಪತ್ನಿಯೆದುರೇ ವ್ಯಕ್ತಿ ಕೊಲೆ

horrific murder in bengaluru

23-02-2018

ಬೆಂಗಳೂರು: ಕುರುಬರಹಳ್ಳಿಯಲ್ಲಿ ನಿನ್ನೆ ರಾತ್ರಿ ಮನೆಗೆ ನುಗ್ಗಿ ಪತ್ನಿ ಎದುರೇ ಪತಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈದು, ಶವವನ್ನು ಪ್ಲಾಸ್ಟಿಕ್ ಶೀಟ್ ನಲ್ಲಿ ಕಟ್ಟಿ ಮಂಚದ ಕೆಳಗೆ ನೂಕಿ ದುಷ್ಕರ್ಮಿಗಳು ಪರಾರಿಯಾಗಿರುವ ಭಯಾನಕ ಕೃತ್ಯ ನಡೆದಿದೆ. ಕೊಲೆಯಾದವನನ್ನು ಪಾನಿಪುರಿ ವ್ಯಾಪಾರಿ ರಾಮನಗರ ಮೂಲದ ನರಸಿಂಹಮೂರ್ತಿ(28)ಎಂದು ಗುರುತಿಸಲಾಗಿದೆ. ಈತ 7 ವರ್ಷಗಳ ಹಿಂದೆ ಮಾಗಡಿ ಮೂಲದ ಅನಿತಾ ಜೊತೆ ವಿವಾಹವಾಗಿದ್ದು ಕುರುಬರಹಳ್ಳಿಯಲ್ಲಿ ವಾಸವಿದ್ದ. ರಾತ್ರಿ 10.30ರ ವೇಳೆ ಊಟಕ್ಕೆ ಕುಳಿತಿದ್ದಾಗ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ನನ್ನ ಮುಖಕ್ಕೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ಗಂಡ ನರಸಿಂಹಮೂರ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಪತ್ನಿ ಅನಿತಾ ಹೇಳಿದ್ದಾರೆ. ನಮ್ಮ ಮನೆಗೆ ನುಗ್ಗಿದ ಮೂವರಲ್ಲಿ ಓರ್ವನ ಹೆಸರು ನನಗೆ ಗೊತ್ತಿದೆ ಎಂದು ಅನಿತಾ ಹೇಳಿದ್ದಾರೆ. ಆದರೆ, ಅನಿತಾ ಹೇಳಿಕೆಯಲ್ಲಿ ಸಾಕಷ್ಟು ಗೊಂದಲಗಳಿದ್ದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder horrific ಗಂಡ ಪೊಲೀಸರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ